ನ್ಯೂಸ್

ಕಳ್ಳರ ಕೈಚಳಕ: ಗಾಳಿ ಆಂಜನೇಯಸ್ವಾಮಿ ದೇವಾಲಯದ ಲಾಕರ್​ಗೆ ಕನ್ನ ಹಾಕಿದ ಖದೀಮರು

ಬೆಂಗಳೂರು: ಬ್ಯಾಟರಾಯನಪುರದ ಬಳಿ ಇರುವ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳವು ನಡೆದಿದೆ.

ಗೋಡೆ ಹತ್ತಿ ದೇವಾಲಯ ಪ್ರವೇಶ ಮಾಡಿದ ಕಳ್ಳರು ಲಾಕರ್​ ಮುರಿದು 48 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.

ಧನುರ್ಮಾಸದ ಪ್ರಯುಕ್ತ ನಡೆದ ಇರುಮುಡಿ ಸೇವೆಯಿಂದ ಸಂಗ್ರಹವಾದ ಹಣವನ್ನು ಲಾಕರ್​ನಲ್ಲಿ ಇಡಲಾಗಿತ್ತು. ದೇವಾಲಯದ ಟ್ರಸ್ಟಿ ಮಂಜುನಾಥ್​ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)