ನ್ಯೂಸ್

ಕೆಲಸಕ್ಕೆ ತೆರಳಿದಾಗ ಜನರ ಪ್ರೀತಿ, ವಿಶ್ವಾಸ ಗಳಿಸಿ

ಸರಗೂರು: ಜಮೀನಿನ ಕಂಬದ ಲೈನ್ ಕೆಲಸಕ್ಕೆ ಹೋದರೆ ಜನರೊಂದಿಗೆ ಪ್ರೀತಿಯಿಂದ ವರ್ತಿಸಿ ವಿಶ್ವಾಸ ಗಳಿಸಬೇಕು ಎಂದು ನಿವೃತ್ತ ಲೈನ್‌ಮನ್ ಫಾರೂಕ್ ಕಿವಿಮಾತು ಹೇಳಿದರು.


ಪಟ್ಟಣದ ಕೆಇಬಿ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಲೈನ್‌ಮನ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಲೈನ್‌ಮನ್‌ಗಳು ಗ್ರಾಮಗಳಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರ ಹಾಗೂ ಅಧಿಕಾರಿಗಳ ಜತೆ ಕೂಡ ಪ್ರೀತಿ, ವಿಶ್ವಾಸದಿಂದ ವರ್ತಿಸಬೇಕು. ನಾವು ಕಂಬದ ಮೇಲೆ ನಿಂತು ಕೆಲಸ ಮಾಡುವಾಗ ಕೈಗೆ ಗ್ಲೌಸ್ ಧರಿಸುವುದೂ ಸೇರಿದಂತೆ ಇತರ ಸುರಕ್ಷತಾ ಸಾಧನಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು.


ಎಇಇ ದೀಪಕ್, ನಿವೃತ್ತ ಲೈನ್‌ಮನ್ ವೆಂಕಟಾಚಲಪತಿ, ಸಹಾಯಕ ಇಂಜಿನಿಯರ್‌ಗಳಾದ ಅಶೋಕ್, ದೀಪಕ್, ಲೈನ್‌ಮನ್ ಮೇಸ್ತ್ರಿಗಳಾದ ಪ್ರಸಾದ್, ಮಹಾದೇವ, ಲೈನ್‌ಮನ್‌ಗಳಾದ ಸುಂದರರಾಜ್, ರಂಗರಾಜು, ನಾಗರಾಜು ಆಜೀದ್, ನಾಗ ಮಲ್ಲೇಶ್, ದಶರಥ್, ರಮೇಶ್, ಶಿವುಕುಮಾರ, ಪ್ರದೀಪ್, ಅಲ್ಲಾಭಕ್ಷ್, ಸಿದ್ದರಾಜು, ರಾಜೇಶ್, ರಮೇಶ್, ಮಹಾದೇವಸ್ವಾಮಿ ಮತ್ತಿತರರು ಹಾಜರಿದ್ದರು.