ನ್ಯೂಸ್

ಬೆಂಗಳೂರಿನಲ್ಲಿ ಗೇಲ್ ಗ್ಯಾಸ್‌ನ 100ನೇ ಕೇಂದ್ರ ಉದ್ಘಾಟನೆ

ಬೆಂಗಳೂರು: ನಗರಗಳಲ್ಲಿ ಅನಿಲ ಪೂರೈಸುವಲ್ಲಿ ಮುಂಚೂಣಿ ಕಂಪನಿಯಾಗಿರುವ ‘ಗೇಲ್ ಗ್ಯಾಸ್’ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ತನ್ನ 100ನೇ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ.

ಈ ನೂತನ ಸಿಎನ್‌ಜಿ ಕೇಂದ್ರವನ್ನು ಗೇಲ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ಕುಮಾರ್ ಗುಪ್ತಾ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ನಗರ ವಾಸಿಗಳಿಗೆ ವೆಚ್ಚ-ಪರಿಣಾಮಕಾರಿ ಇಂಧನ ಪರ್ಯಾಯವನ್ನು ಒದಗಿಸಲು ಕಂಪನಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಗೇಲ್ ಗ್ಯಾಸ್ ನೆಟ್‌ವರ್ಕ್ ಆಡಿಯಲ್ಲಿ 10 ಕೇಂಧ್ರಗಳು ಕಂಪನಿ ಒಡೆತನದಲ್ಲಿ, 31 ಡೀಲರ್ ಒಡೆತನದಲ್ಲಿ ಹಾಗೂ 59 ಚಿಲ್ಲರೆ ಮಾರಾಟ ಮಳಿಗೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳ ಸಹಯೋಗದಲ್ಲಿ ಕಾರ್ಯಾಚರಿಸುತ್ತಿವೆ. ಪ್ರತಿಯೊಂದು ಕೇಂದ್ರವೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಸಿಎನ್‌ಜಿ ಚಾಲಿತ ವಾಹನಗಳಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಇಂಧನ ತುಂಬುವಿಕೆಯನ್ನು ಖಚಿತಪಡಿಸುತ್ತದೆ. ಸಿಎನ್‌ಜಿ ಕೇಂದ್ರ ಹಾಗೂ ವಾಹನಗಳ ಸುರಕ್ಷತೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಗೇಲ್ ಗ್ಯಾಸ್‌ನ ಸಿಇಒ ಗೌತಮ್ ಚಕ್ರವರ್ತಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.