ನ್ಯೂಸ್

ಧುಮ್ಮಿಕ್ಕುತ್ತಿದೆ ಗಗನ ಚುಕ್ಕಿ, ಭರಚುಕ್ಕಿ! ಜಲಪಾತದ ಸೊಬಗು 'ವಿಜಯವಾಣಿ' ಕ್ಯಾಮರಾದಲ್ಲಿ ಸೆರೆಯಾಗಿರುವುದು ಹೀಗೆ…

ಬೆಂಗಳೂರು: ಶಿವನಸಮುದ್ರ ಬಳಿಯ ಗಗನಚುಕ್ಕಿ, ಭರಚುಕ್ಕಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ನೊರೆ ಹಾಲಿನಂತೆ ಹರಿಯುತ್ತಿರುವ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಕುಟುಂಬ ಸಮೇತ ಬರುತ್ತಿದ್ದಾರೆ. ಎತ್ತರದಿಂದ ಧುಮ್ಮಿಕ್ಕುತ್ತಿರುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಭೋರ್ಗರೆಯುವ ಭರಚುಕ್ಕಿ ಜಲಪಾತದ ವೈಭೋಗ 'ವಿಜಯವಾಣಿ' ಛಾಯಾಗ್ರಾಹಕ ರಾಘವೇಂದ್ರ ಸಿ. ಕ್ಯಾಮರಾದಲ್ಲಿ ಸೆರೆಯಾಗಿರುವುದು ಹೀಗೆ...