ಮುಂಬೈ: ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿರುವ ನಾಯಕಿಯಾಗಿ ಬೇರೆ-ಬೇರೆ ಭಾಷೆಯ ಸ್ಟಾರ್ ಹೀರೋಗಳೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದ್ದ ನಟಿ ( ravali) ಇದೀಗ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಈ ನಟಿ ಯಾರು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ...
90 ರ ದಶಕದಲ್ಲಿ ಅವರು ತೆಲುಗು ಮತ್ತು ತಮಿಳಿನಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ ರಾವಳಿ. ಅವರು 1990 ರಲ್ಲಿ ಮಲಯಾಳಂ ಚಿತ್ರ ಜಡ್ಜ್‌ಮೆಂಟ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆಂಧ್ರ ಮೂಲದ ರಾವಳಿ ಕನ್ನಡ,ತೆಲಗು,ತಮಿಳು,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.`ಗಡಿಬಿಡಿ ಕೃಷ್ಣ' (Gadibidi Krishna) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾವಳಿ ನಂತರ `ಕುಬೇರ',`ಖಳನಾಯಕ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ವಂಶೋದ್ಧಾರಕ ಬೇಕೆಂಬ ಹಠ ಕಸಿದೀತು ಕುಟುಂಬದ ನೆಮ್ಮದಿ!
ಮುಂದಿನ ವರ್ಷ, ಅವರು ಜಯಭೇರಿ ಚಿತ್ರದ ಮೂಲಕ ಟಾಲಿವುಡ್‌ಗೆ ಪ್ರವೇಶಿಸಿದರು. ಅವರ ವೃತ್ತಿಜೀವನದ ಆರಂಭದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಪೆಲ್ಲಿ ಸಂದಡಿ ಚಿತ್ರವು ಅವರ ವೃತ್ತಿಜೀವನಕ್ಕೆ ತಿರುವು ನೀಡಿತು. ಈ ಚಿತ್ರದೊಂದಿಗೆ ಅವರು ರಾತ್ರೋರಾತ್ರಿ ತಾರೆಯಾದರು. ಅವರು ಒರೆ ರಿಕ್ಷಾ, ವಿನೋದಂ, ಚಿನ್ನಬ್ಬೈ, ಮುದ್ದುಲ ಮೊಗುಡು ಮತ್ತು ಶುಕ್ಲಕು ಮುಂತಾದ ಚಿತ್ರಗಳಲ್ಲಿ ನಟಿಸಿ ಖ್ಯಾತಿಯನ್ನು ಗಳಿಸಿದರು.
ರಾವಳಿ ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ, ಅವರು ಮದುವೆಯಾದ ನಂತರ ನಟನೆಯನ್ನು ನಿಲ್ಲಿಸಿ ಉದ್ಯಮದಿಂದ ದೂರ ಉಳಿದರು. ರಾವಳಿ 2007 ರಲ್ಲಿ ನೀಲಿ ಕೃಷ್ಣ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಸಹೋದರಿ ಹರಿತಾ ಕೂಡ ನಟಿ. ಅವರು ತೆಲುಗಿನಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕೊನೆಯದಾಗಿ 2011 ರಲ್ಲಿ ತೆಲುಗು ಚಿತ್ರ ಮಾಯಗಾಡುದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ವೆಂಕಟೇಶ್ ಮತ್ತು ಬಾಲಕೃಷ್ಣ ಮತ್ತು ಮಲಯಾಳಂನಲ್ಲಿ ಮೋಹನ್ ಲಾಲ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಮದುವೆಯ ನಂತರ ರಾವಳಿ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಸುಂದರ ನೋಟ ಮತ್ತು ನೈಸರ್ಗಿಕ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ.