ನ್ಯೂಸ್

ರಾಜ್ಯದಲ್ಲಿ 800 ಕ್ಕೂ ಅಧಿಕ ಕೆರೆ ಅಭಿವೃದ್ಧಿ: ಓಂಕಾರೇಶ್ವರ ಶ್ರೀಗಳು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಕೆರೆ ಕಟ್ಟೆಗಳು ಜನರ ಹಾಗೂ ಜಾನುವಾರುಗಳ ಜೀವನಾಡಿ. ಅವುಗಳ ಸಂರಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಿದೆ ಎಂದು ಸೊರಟೂರಿನ ಓಂಕಾರೆಶ್ವರ ಹಿರೇಮಠದ  ಪಟ್ಯಾಧ್ಯರು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹುಯಿಲಗೋಳ ಗ್ರಾಮ ಪಂಚಾಯತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಿಂದ ನಮ್ಮೂರು&ನಮ್ಮ ಕೆರೆ ಯೋಜನೆ ಅಡಿ ಹೂಳು ತೆಗೆಯುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಗಳಲ್ಲಿನ ಕೆರೆ ಸಂರಣೆ ನಮ್ಮೆಲ್ಲರ ಅತ್ಯವಶ್ಯಕ ಜವಾಬ್ದಾರಿ. ಕೆರೆ ಸಂರಣೆಯಿಂದ ಭೂಮಿಯ ಮೇಲಿನ ಪ್ರಾಣಿ ಪಗಳಿಗೂ ಮನುಷ್ಯರಿಗೂ ನೀರಿನ ಲಭ್ಯತೆ ಸಿಗುತ್ತದೆ. ಮುಂದಿನ ಜನಾಂಗದ ಪೀಳಿಗೆಗೆ ಅದನ್ನು ಸಂರಣೆ ಮಾಡುವುದು ಮತ್ತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಅಮ್ಮನವರು ಕೆರೆ ಸಂರಣೆಯ ಮೂಲಕ ರಾಜ್ಯದಲ್ಲಿ ಈಗಾಗಲೇ 803 ಕೆರೆಗಳ ಕಾಮಗಾರಿ ನೆರವೇರಿಸಿದ್ದಾರೆ. ರಾಜ್ಯದಲ್ಲಿ ಕೆರೆಗಳ ಸಂರಣೆಗೆ ಗ್ರಾಮಾಭಿವೃದ್ಧಿ ಸಂಟನೆ ಆದ್ಯತೆ ನೀಡಿದ ಕಾರ್ಯಕ್ರಮವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಯೋಗೇಶ ಎ. ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿಯೇ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯನ್ನು ಆರಂಭಿಸಿದ್ದಾರೆ. ಕೆರೆ ಅಭಿವೃದ್ಧಿ ಯೋಜನೆ ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಎಂದರು.

ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಯ್ಯ ಚನ್ನಬಸಪ್ಪ ಕೊರವಣ್ಣನವರ ಮಾತನಾಡಿ, ಕೃಷಿ ಇಲಾಖೆ ಯಿಂದಲೂ ರೈತರಿಗೆ ಕೃಷಿ ಹೊಂಡಗಳನ್ನು ಮಾಡಿಕೊಡಲಾಗುತ್ತದೆ. ಈ ಕೆರೆ ಕಾಮಗಾರಿ ಮೂರ್ನಾಲ್ಕು ಗ್ರಾಮದ ರೈತರಿಗೆ ಕುಡಿಯಲು ಹಾಗೂ ಪ್ರಾಣಿ ಪಗಳಿಗೆ ಅನುಕೂಲ ವಾಗಿವೆ. ಮುಂದೆ ಇಲಾಖೆಯಿಂದ ಆಗುವ ಪ್ರಯೋಜನವನ್ನು ಕೆರೆಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದರು.

ಚಂದ್ರಶೇಖರ್​ ಹುಣಸಿಕಟ್ಟಿ, ವಾಸುದೇವ ಪೂಜಾರ, ಸುರೇಂದ್ರ ನಾಯಕ ತಿಪ್ಪಣ್ಣ ಗಂಗಪ್ಪನವರ, ಮಲ್ಲಿಕಾರ್ಜುನಗೌಡ, ಕಿರಣ ಮಹೇಂದ್ರಕರ ಇತರರು ಇದ್ದರು.