ನ್ಯೂಸ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶ್ವ ಪರಿಸರ ದಿನಾಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಪರಿಸರವನ್ನು ನಾವು ರಸಿದರೆ ಪರಿಸರ ನಮ್ಮನ್ನು ರಸುತ್ತದೆ. ಪಂಚಭೂತಗಳಲ್ಲಿ ದೇವರನ್ನು ಕಾಣುವ ಸಂಸತಿ ನಮ್ಮದು. ತೆಂಗು ಆಲದಮರ, ಬನ್ನಿ ಮರ ಇನ್ನಿತರ ಮರಗಳನ್ನು ದೈವ ಸ್ವರೂಪಿಯಾಗಿ ಕಂಡರು ಪರಿಸರವನ್ನು ನಾಶ ಮಾಡುವುದನ್ನು ಮನುಷ್ಯ ಬಿಟ್ಟಿಲ್ಲ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮಾ ಎನ್​. ಜಿ. ಹೇಳಿದರು.

ಶಹರ ವಲಯದ ಶಿವಾನಂದ ನಗರ ಕಾರ್ಯೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆಗಳ ಅಗಲೀಕರಣ, ಕೆರೆಗಳ ಮುಚ್ಚುವಿಕೆ, ಕಾಡಿನ ನಾಶ ಇದೇ ರೀತಿ ಪ್ರಕೃತಿ ನಾಶ ಆಗುತ್ತಿದೆ. ಪ್ರಾಣಿ ಸಂಕುಲ ಮನುಷ್ಯ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ.ೆ ಇದನ್ನು ತಪ್ಪಿಸಬೇಕಾದರೆ ಗಿಡಗಳನ್ನು ನಾಟಿ ಮಾಡಿ ಸಂರಣೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಹಾತಲಗೇರಿಯ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ವಿಶ್ವ ಪರಿಸರ ದಿನವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡುವ ಅಗತ್ಯವನ್ನು ನಮಗೆ ಕಲಿಸುತ್ತದೆ. ಈ ದಿನದಂದು ನಾವೆಲ್ಲರೂ ನಮ್ಮ ಭೂಮಿಯನ್ನು ರಸುತ್ತೇವೆ. ಈ ನಿಟ್ಟಿನಲ್ಲಿ ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಶ್ಲಾನೀಯ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ ಎಂ. ಎಂ. ಜೋಗಿನ ಮಾತನಾಡಿ, ಈ ದಿನವನ್ನು ಸಸಿ ನೆಟ್ಟು ಆಚರಿಸುವುದು ಜಾಗತಿಕವಾಗಿ ಇರುವ ವಾಡಿಕೆಯಾಗಿದೆ. ಆದರೆ, ಇದರ ಹೊರತಾಗಿ ಪರಿಸರಕ್ಕೆ ಅಥವಾ ಭೂಮಿಗೆ ಸವಾಲಾಗಿರುವ ಹವಾಮಾನ ಬದಲಾವಣೆ, ಪ್ಲಾಸ್ಟಿಕ್​ನಂತಹ ಗಂಭೀರ ಸಮಸ್ಯೆಗಳ ಬಗ್ಗೆ ನಾವು ಚಚಿರ್ಸಿ ಪರಿಹಾರ ಕಂಡುಕೊಳ್ಳಬೇಕಿದೆ. ನಮ್ಮ ಮಕ್ಕಳಿಗೆ ಇಂದಿನಿಂದಲೆ ಪರಿಸರ ಮಾಲಿನ್ಯ, ಪ್ಲಾಸ್ಟಿಕ್​ ಬಳಕೆ, ಪರಿಸರ ಸ್ವಚ್ಛತೆಯ ಜಾಗೃತಿ ಮೂಡಿಸಿ ವಿಶ್ವ ಪರಿಸರ ದಿನಕ್ಕೆ ತಮ್ಮದೇ ಕೊಡುಗೆ ನೀಡಬಹುದು ಎಂದು ತಿಳಿಸಿದರು.

ಮಕ್ಕಳಿಗೆ ಪರಿಸರ ಕಾರ್ಯಕ್ರಮ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ವಿವಿಧ ಜಾತಿ ಎಲೆಗಳ ಗುರುತಿಸುವಿಕೆ, ವಿವಿಧ ಜಾತಿ ಸಸಿ ಬೀಜಗಳ ಗುರುತಿಸುವಿಕೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸುಷ್ಮಾ, ದ್ಯಾಮವ್ವ ವಡ್ಡರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.