ಗದಗ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಹಾಮಾನವತವಾದಿ, ಶ್ರೇಷ್ಠದಾರ್ಶನಿಕ, ಸಮಾಜ ಸುಧಾರಕ, ಜಗಜ್ಯೋತಿ ಬಸವೇಶ್ವರರ 920 ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ನಮ್ಮ ಮಕ್ಕಳಿಗೆ ವಾರಕ್ಕೆ ಒಂದಾದರೂ ಬಸವೇಶ್ವರರ ವಚನಗಳನ್ನು ಕಲಿಸಬೇಕು. ಅದರಂತೆ ಆಚರಣೆಯನ್ನು ಮಾಡಬೇಕು. 12ನೇ ಶತಮಾನದ ಮಾದರಿಯ ಸಂವಿಧಾನವೇ ಇಂದು ಭಾರತದಲ್ಲಿ ನಡೆಯುತ್ತಿದ್ದು, ಸಂವಿಧಾನದ ಮೂಲ ಪುರಷರೇ ಮಹಾತ್ಮ ಬಸವೇಶ್ವರರು ಎಂದರು.
ಜಿಲ್ಲಾ ವಕ್ತಾರ ಎಂ. ಎಂ. ಹಿರೇಮಠ ಮಾತನಾಡಿ 12ನೇ ಶತಮಾನದಲ್ಲಿ ಇದ್ದಂತ ಅಸ್ಪಶೃತೆಯನ್ನು ಹೊಗಲಾಡಿಸಲು ಬಸವೇಶ್ವರರು ಹೋರಾಟ ಮಾಡಿದರು. ಎಲ್ಲ ಜಾತಿಯವರಿಗೂ ಸಮಾನ ಅವಕಾಶವನ್ನು ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತೆಗೆದುಕೊಂಡು ಬಂದರು. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ ವಚನದಿಂದ ಇವತ್ತು ನಾವು ಮಾಡುವ ಕಾಯಕವನ್ನು ಬಹಳ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮಾಡಿದಾಗ ಮಾತ್ರ ಸಮಾನತೆ ತರಲು ಸಾಧ್ಯ ಎಂದರು.
ಎಂ. ಎಸ್. ಕರೀಗೌಡ್ರ ಮಾಡನಾಡಿ, ನಾವು ಮಾಡುವ ಉದ್ಯೋಗದಿಂದ ಜಾತಿ ಸೃಷ್ಠಿಯಾಯಿತು. ಮಣ್ಣಿನ ಕೆಲಸವನ್ನು ಮಾಡುವ ಕುಂಬಾರನಾದ, ಬಟ್ಟೆ ತೊಳೆಯುವವ ಮಡಿವಾಳನಾದ, ಕಬ್ಬಿಣ ಕೆಲಸ ಮಾಡುವವ ಕಮ್ಮಾರನಾದ. ಈ ರೀತಿಯಾಗಿ ನಾವು ಮಾಡುವ ಕಾಯಕದಿಂದ ಜಾತಿಗಳು ಹುಟ್ಟಿದವು. ಬಸವೇಶ್ವರರು ಎಲ್ಲ ಜಾತಿಯವರನ್ನು ಸಮನಾಗಿ ಕಂಡರು ಎಂದರು.
ಶ್ರೀಪತಿ ಉಡುಪಿ, ಕಮಲಾ ಅಂಗಡಿ, ಪ್ರೀತಿ ಹೊನಗುಡಿ, ಸಂಜೀವ ಕಟವಟೆ, ಸುರೇಶ ಮರಳಪ್ಪನವರ, ಜಿಲ್ಲಾ ಯುವ ಮೋರ್ಚಾ ಅಧ್ಯ ಸಂತೋಷ ಅಕ್ಕಿ, ಅಶೋಕ ಸಂಕಣ್ಣವರ, ಕೆ. ಪಿ. ಕೋಟಿಗೌಡ್ರ, ಸುಧೀರ ಕಾಟಿಗರ ಹಲವರು ಇದ್ದರು.