ನ್ಯೂಸ್

ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯಲ್ಲಿ ಬಸವಣ್ಣನವರ ಜಯಂತಿ ಆಚರಣೆ.

ಗದಗ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ಮಹಾಮಾನವತಾವಾದಿ, ವಿಶ್ವ ಗುರು ಬಸವಣ್ಣ ಅವರ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯಶಿಕ್ಷಕ ಮಲ್ಲೇಶ ಡಿ ಎಚ್ ಮಾತನಾಡಿದ ಅವರು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದು,ಜಗದಲಿ ತುಂಬಿದ ಮೂಡನಂಬಿಕೆ, ಕಂದಾಚಾರ, ಅಂಧಶ್ರದ್ಧೆ ಹೋಗಲಾಡಿಸಲು ಪ್ರಯತ್ನಿಸಿ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸಿ, ಸಮತೆಯ ಜ್ಯೋತಿ ಬೆಳಗಿಸುವ ಮೂಲಕ ಸಮಾನತೆಯ ಹರಿಕಾರ, ವಿಶ್ವ ಬಂಧು, ವಿಶ್ವ ಜ್ಯೋತಿ ಬಸವಣ್ಣ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸೇರಿ ಸಾಗಬೇಕು ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಪಾರವ್ವ ಉಮೇಶ ಲಮಾಣಿ, ಉಪಾಧ್ಯಕ್ಷ ಮಂಜಪ್ಪ ಲಕ್ಷ್ಮಣ ರಜಪೂತ, ಮಾರುತಿ ಪವಾರ, ಸೋಮನಾಥ ಲಮಾಣಿ,ರಾಮಪ್ಪ ಲಮಾಣಿ, ಲಕ್ಷ್ಮಣ ಲಮಾಣಿ ಸಾವಕ್ಕ ಲಮಾಣಿ, ಶಾಲಾ ಮಕ್ಕಳು ಇದ್ದರು.