ನ್ಯೂಸ್

ಜಿ-20 ಶೃಂಗಸಭೆಯ ನೇರಪ್ರಸಾರ: ವಿಶ್ವದ ನಾಯಕರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ: ಬಹುನಿರೀಕ್ಷಿತ ಜಿ-20 ನಾಯಕರ ಶೃಂಗಸಭೆ ಇಂದಿನಿಂದ (ಸೆ.09) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿದೆ. ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ಇದು ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ವಿಶ್ವದ 20 ಪ್ರಮುಖ ಆರ್ಥಿಕತೆಯ ನಾಯಕರು ಇಂದು ಮತ್ತು ನಾಳೆ ಒಟ್ಟುಗೂಡಲಿದ್ದಾರೆ. ಈ ಸಭೆ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್‌ನ ಭಾರತ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹವಾಮಾನ ಬದಲಾವಣೆ, ಸಾಲ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಬಗ್ಗೆ ಚರ್ಚೆಗಳಾಗಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್​ನೊಂದಿಗೆ ಭಾರತ ಶೃಂಗಸಭೆಯನ್ನು ಆಯೋಜಿಸಿದ್ದು, ಅದರ ನೇರಪ್ರಸಾರವನ್ನು ಮೇಲಿನ ಯೂಟ್ಯೂಬ್​ ಲಿಂಕ್​ ಮೂಲಕ ವೀಕ್ಷಣೆ ಮಾಡಬಹುದಾಗಿದೆ.