ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ(Social Media) ಸುಳ್ಳು ಸುದ್ದಿ ಹಬ್ಬಿಸುವುದು, ನಕಲಿ ಫೋಟೋವನ್ನು ಹರಿಬಿಡುವುದು ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್(Dr.G. Parameshwar) ಅವರು ಹೇಳಿದ್ದಾರೆ.
"ಸುಳ್ಳು ಸುದ್ದಿಗಳಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವ ವಿಚಾರವನ್ನು ಮುನ್ನೆಲೆಗೆ ತಂದ ಡಾ.ಜಿ. ಪರಮೇಶ್ವರ್ ಅವರು, ಸೋಶೀಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಾಗೂ ಸ್ಟೋರಿಗಳನ್ನು ರೂಪಿಸಿ ಅದನ್ನು ಹರಿಬಿಡುತ್ತಾರೆ. ಇದು ಶಾಂತಿ ಕದಡುವ ಹಾಗೂ ಬೇರೆ ಬೇರೆ ಸಮುದಾಯಗಳ(Community) ಕೋಪಕ್ಕೆ ಕಾರಣವಾಗುತ್ತಿದೆ. ಇದನ್ನು ಯಾರು ಮಾಡುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ" ಎಂದು ಹೇಳಿದ್ದಾರೆ.
"ಕಮ್ಯೂನಲ್ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಈ ಹಿಂದೆ ಗಲಭೆಗಳು ನಡೆದಿರುವುದು ನಮಗೆಲ್ಲಾ ತಿಳಿದಿದೆ. ಈ ಕುರಿತು ಗೂಗಲ್(Google) ಹಾಗೂ ಫೇಸ್ಬುಕ್ನ ನ್ಯಾಷನಲ್ ಹೆಡ್ಗಳನ್ನು ಭೇಟಿ ಮಾಡಿ ಸಹಕರಿಸುವಂತೆ ಮನವಿ ಮಾಡುತ್ತೇನೆ. ಅಂತಹ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಕ್ರಮ ತಗೆದುಕೊಳ್ಳಲು ಮುಂದಾಗಿದ್ದೇವೆ" ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.