ನ್ಯೂಸ್

ವಿದ್ಯಾರ್ಥಿಗಳಿಂದ ಮೀನಿನ ಅಂತ್ಯಸಂಸ್ಕಾರ

ಮೀನುಗಳ ಚಂಚಲ ಸೌಂದರ್ಯವನ್ನು ಆಸ್ವಾದಿಸಲು ಅವುಗಳನ್ನು ಮನೆಯಲ್ಲಿಯೇ ಸಾಕಿಕೊಳ್ಳುವುದುಂಟು. ಸಿಲ್ವರ್ ಕಾರ್ಪ್ ಪ್ರಭೇದದ ಮೀನೊಂದನ್ನು ಟೆಕ್ಸಾಸ್ ವಿಶ್ವವಿದ್ಯಾಲಯದ ಕ್ಯಾಂಪಸ್​ನ ಅಕ್ವೇರಿಯಂನಲ್ಲಿ ಸಾಕಲಾಗಿತ್ತು. ತಮ್ಮ ನೆಚ್ಚಿನ ಲೂಂಪಾ ಎಂಬ ಈ ಮೀನು ಕೊನೆಯುಸಿರೆಳೆದ ನೋವಿನಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅದಕ್ಕೆ ಅಂತಿಮ ಸಂಸ್ಕಾರ ಮಾಡುವ ಮೂಲಕ ಭಾವಪೂರ್ಣ ವಿದಾಯ ಹೇಳಿದ್ದಾರೆ.

ಪೆನ್ ಕೇಸ್ ಒಂದನ್ನು ಶವಪೆಟ್ಟಿಗೆಯನ್ನಾಗಿ ಮಾಡಿ ಅದರಲ್ಲಿ ಮೀನನ್ನು ಇಡಲಾಗಿತ್ತು. ಸಂಗೀತ, ಹಾಡು ಹಾಗೂ ಘೊಷಣೆಗಳ ಮಧ್ಯೆ ಮೀನನ್ನು ಮಣ್ಣು ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಸಲಾಗಿದೆ.