ನ್ಯೂಸ್

ಅಮೆರಿಕದಲ್ಲಿ ನಡೆದ ಅಂತ್ಯಕ್ರಿಯೆ

ದಾವಣಗೆರೆ: ಅಮೆರಿಕದಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ದಾವಣಗೆರೆ ಮೂಲದ ಮೂವರ ಮೃತದೇಹಗಳ ಅಂತ್ಯಕ್ರಿಯೆಯನ್ನು ಶನಿವಾರ ಬಾಲ್ಟಿಮೋರ್‌ನಲ್ಲಿ ನೆರವೇರಿಸಲಾಗಿದೆ.

ಭಾರತೀಯ ಕಾಲಮಾನದಂತೆ ಶನಿವಾರ ರಾತ್ರಿ 11.30ಕ್ಕೆ ಮೃತ ಯೋಗೇಶ್ ಹಾಗೂ ಪ್ರತಿಭಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶವಸಂಸ್ಕಾರ ನಡೆಸಲಾಗಿದೆ.

ಮೃತ ದೇಹಗಳು ಡಿಕಾಂಪೋಸ್ ಆಗಿದ್ದರಿಂದ ಶವಗಳನ್ನು ಭಾರತಕ್ಕೆ ಕೊಂಡೊಯ್ಯುವ ಸ್ಥಿತಿಯಲ್ಲಿ ಇಲ್ಲ ಎಂದು ಬಾಲ್ಟಿಮೋರ್ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ ಹಿನ್ನೆಲೆ ಅಲ್ಲಿಯೇ ಶವಸಂಸ್ಕಾರ ನಡೆದಿದೆ.

ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಹಾಗೂ ಪ್ರತಿಭಾಳ ತಾಯಿ ಪ್ರೇಮಾ, ಸಹೋದರ ಗಣೇಶ ಅಮೆರಿಕಾಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಮೂಲದ ಯೋಗೇಶ್ ಪತ್ನಿ, ಪುತ್ರನನ್ನು ಶೂಟ್ ಮಾಡಿ ಬಳಿಕ ಗುಂಡು ಹಾರಿಸಿಕೊಂಡಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ಬಹಿರಂಗಗೊಂಡಿದ್ದು ಬಾಲ್ಟಿಮೋರ್ ಪೊಲೀಸರಿಂದ ತನಿಖೆ ಮುಂದುವರಿದಿದೆ.