ಚನ್ನಕೇಶಪುರ ಗ್ರಾಮದಲ್ಲಿ ಡೆಂಘೆ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಧೂಮೀಕರಣ ಸಿಂಪಡಣೆ ಕಾರ್ಯ ನಡೆಯಿತು.  
ನ್ಯೂಸ್

ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣ

ರವಿಕುಮಾರ್ ಪಿ. ಕೆ

ಬೆಟ್ಟದಪುರ: ಬೆಟ್ಟದಪುರ ಸಮೀಪದ ಚನ್ನಕೇಶವಪುರ ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೋಮವಾರ ಧೂಮೀಕರಣ (ಫಾಗಿಂಗ್)ಮಾಡಲಾಯಿತು.

ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಡೆಂೆ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕಣಗಾಲು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಚನ್ನಕಲ್ ಕಾವಲು ಗ್ರಾಪಂ ವತಿಯಿಂದ ಪ್ರಮುಖ ಬೀದಿಗಳು ಸೇರಿದಂತೆ ಮನೆ ಮನೆಗಳ ಬಳಿ ಧೂಮೀಕರಣ ಕಾರ್ಯ ನಡೆಯಿತು. ಆರೋಗ್ಯ ಇಲಾಖೆ ವತಿಯಿಂದ ಕೀಟಜನ್ಯ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು.

ಗ್ರಾಪಂ ಸದಸ್ಯ ಶೇಖರ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ವಿಶ್ವನಾಥ್, ಸಮುದಾಯ ಆರೋಗ್ಯಾಧಿಕಾರಿ ಧರ್ಮೇಶ್, ಆಶಾ ಕಾಯಕರ್ತೆ ನೇತ್ರಾವತಿ, ವಾಟರ್‌ಮೆನ್ ಬಸವರಾಜು ಇದ್ದರು.