ನ್ಯೂಸ್

ವಿಡಿಯೋ ಎಡಿಟಿಂಗ್ ನಲ್ಲಿ ಆಸಕ್ತಿ ಇದೆಯೇ? ಎಫ್​​ಟಿಐಐ ಫೌಂಡೇಶನ್ ಕೋರ್ಸ್​​ಗೆ ಅರ್ಜಿ ಸಲ್ಲಿಸಿ

sspmiracle1982

ಪುಣೆ: ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್​​ಟಿಐಐ) ವೀಡಿಯೊ ಎಡಿಟಿಂಗ್‌ (ಆನ್‌ಲೈನ್‌) ಕುರಿತ ಫೌಂಡೇಶನ್ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್​ಲೈನ್​​ನಲ್ಲಿ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 20ರವರೆಗೆ ಈ ಕೋರ್ಸ್ ನಡೆಯಲಿದೆ.

ತರಗತಿಗಳನ್ನು ಗೂಗಲ್ ಕ್ಲಾಸ್​​ರೂಮ್ ಮತ್ತು ಗೂಗಲ್ ಮೀಟ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸಲಾಗುವುದು. ಕೋರ್ಸ್ ಮುಗಿದ ನಂತರ ಅಭ್ಯರ್ಥಿಗಳಿಗೆ ಇ-ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಮಾಣಪತ್ರ ಪಡೆಯಲು ಶೇ 90 ಹಾಜರಾತಿ ಕಡ್ಡಾಯವಾಗಿದೆ.

ಸೆಪ್ಟೆಂಬರ್ 03 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅಭ್ಯರ್ಥಿಗಳು ಎಫ್‌ಟಿಐಐ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 15 ಅಭ್ಯರ್ಥಿಗಳು ಭಾಗವಹಿಸಬಹುದು. ಕನಿಷ್ಠ 12 ಜನ ಅಭ್ಯರ್ಥಿಗಳು ಅರ್ಜಿ ತಲುಪಿದರೆ ಕೋರ್ಸ್ ಪ್ರಾರಂಭಿಸಲಾಗುತ್ತದೆ. ತರಗತಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ನಡೆಯಲಿವೆ.