ನ್ಯೂಸ್

ಆರೈಕೆ ಮಾಡಲು ಬೇಸತ್ತು ತಾಯಿಯನ್ನೇ ಕೊಂದ ಪಾಪಿ ಮಗ! Mother

Mother : ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು(85) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ.

ಘಟನೆ ಏನು?

ಯಶೋಧಬಾಯಿ ಮುರುಳೀಧರ್​ ಪಾಟೀಲ್ ಮೃತ ಎಂದು ತಿಳಿದುಬಂದಿದೆ. ಅವರ ಮಗ ಅರವಿಂದ್​ನೊಂದಿಗೆ ಈಕೆ ವಾಸಿಸುತ್ತಿದ್ದಳು. ಮಂಗಳವಾರ (ಅ.7) ರಾತ್ರಿ ತಾಯಿಯು ಮಲಗಿದ್ದಾಗ ಅರವಿಂದ್​ ಆಕೆಯ ಕುತ್ತಿಗೆಯನ್ನು ತನ್ನ ಕೈಗಳಿಂದ ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಆತ ನೇರವಾಗಿ ಪೊಲೀಸ್​ ಠಾಣೆಗೆ ಹೋಗಿ ನನ್ನ ತಾಯಿಯನ್ನು ನಾನೇ ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಮೊದಲಿಗೆ ಅರವಿಂದ್​ ಅವರ ಮಾತುಗಳನ್ನು ಪೊಲೀಸರು ನಂಬಲಿಲ್ಲ. ಆದರೆ, ಘಟನೆಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಇಲ್ಲಿ ಯಶೋಧ ಹಾಸಿಗೆಯಲ್ಲಿ ಮೃತಪಟ್ಟಿರುವುದನ್ನು ನೋಡಿದ್ದಾರೆ. ಇದಾದ ನಂತರ ಘಟನೆಯ ಬಗ್ಗೆ ಮಾಹಿತಿಯನ್ನು ತಿಳಿಯಲು ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದಾರೆ.

ಪೊಲೀಸರು ಅರವಿಂದ್​ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅರವಿಂದ್​ (55) ವಿವಾಹಿತನಾಗಿದ್ದರೂ ಆತ ಮಾನಸಿಕ ಅಸ್ವಸ್ಥನಾಗಿರುವುದರಿಂದ ಆತನನ್ನು ತೊರೆದಿದ್ದಳು. ತಾಯಿಯೊಟ್ಟಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ವರದಿ ಬಂದಿದೆ.(ಏಜೆನ್ಸೀಸ್​)