‘ಹಣ್ಣುಗಳ ರಾಜ’ ಎಂದೇ ಖ್ಯಾತಿ ಪಡೆದಿರುವ ಮಾವನ್ನು ಕರ್ನಾಟಕದ ಬಹುತೇಕ ಪ್ರಾಂತ್ಯಗಳಲ್ಲಿ ಬೆಳೆಯಲಾಗುತ್ತದೆ ಮತ್ತು ಆಯಾ ಪ್ರಾಂತ್ಯಗಳ ಮಾವು ಅವುಗಳದ್ದೇ ಆದ ವೈಶಿಷ್ಟ್ಯ ಹೊಂದಿದ್ದು, ಪರಿಮಳ, ರುಚಿಗೆ ಹೆಸರುವಾಸಿಯಾಗಿವೆ. ಅಷ್ಟೇ ಅಲ್ಲ, ಮಾವಿಗೆ ‘ರಾಜ್ಯದ ಹಣ್ಣು’ ಎಂಬ ಮಾನ್ಯತೆಯೂ ಸಿಕ್ಕಿರುವುದು ಇದರ ಪ್ರಾಮುಖ್ಯಕ್ಕೆ ಸಾಕ್ಷಿಯಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರ ಕೈಹಿಡಿದಿರುವ ಮಾವು ಹೊರರಾಜ್ಯ ಮತ್ತು ಹೊರದೇಶಗಳಿಗೆ ರಫ್ತಾಗುತ್ತಿದೆ. ಮಾವು ತಳಿಗಳ ಸಂವರ್ಧನೆಗೂ ಹಲವು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಪ್ರಮುಖ ತಳಿಗಳು: ಅಲ್ಪಾನ್ಸೋ/ಬಾದಾಮಿ/ಆಪೂಸ್. ಸಿಹಿ ಮತ್ತು ರುಚಿಕರ ತಿರಳು ಹೊಂದಿದ್ದು, ಬಾದಾಮಿ ಹಣ್ಣಿನ ಸಿಕರಣೆ/ರಸ ಬಹು ಸ್ವಾದಿಷ್ಟ. ಹಾಗಾಗಿಯೇ ಸಮಾರಂಭಗಳಲ್ಲಿ ಆಪೂಸ್ಗೆ ಪ್ರಥಮ ಆದ್ಯತೆ. ಇದು ವಿಟಮಿನ್ ಎ ಹಾಗೂ ಸಿ ಅಂಶ ಹೊಂದಿದ್ದು, ಏಪ್ರಿಲ್ನಿಂದ-ಜೂನ್ವರೆಗೆ ಲಭ್ಯ. ತಲಾ ಹಣ್ಣು 200-250 ಗ್ರಾಂ ತೂಗುತ್ತವೆ. ಬಂಗಾರದ ಹಳದಿ ಬಣ್ಣ (ಕೆಲವೆಡೆ ಕೇಸರಿ) ಹೊಂದಿರುವ ಈ ಹಣ್ಣುಗಳು, ಹೆಚ್ಚು ದಿನಗಳವರೆಗೆ ಉಳಿಯುತ್ತವೆ. ತೋತಾಪುರಿ ಹಣ್ಣುಗಳು ದೊಡ್ಡ ಗಾತ್ರ ಹೊಂದಿದ್ದು, ವಿಶಿಷ್ಟ ಪರಿಮಳ ಹಾಗೂ ರುಚಿಗೆ ಪ್ರಸಿದ್ಧಿ ಹೊಂದಿವೆ.
ಏಪ್ರಿಲ್ನಿಂದ ಮೇ ತಿಂಗಳವರೆಗೆ ಲಭ್ಯ. ಇದರ ಸವಿಯಾದ ರುಚಿ ಹಾಗೂ ಪರಿಮಳದಿಂದಾಗಿ ‘ಜೇನು ಮಾವು’ ಎಂದೂ ಕರೆಯಲ್ಪಡುತ್ತದೆ.
ಮೇನಿಂದ ಜೂನ್ ತಿಂಗಳವರೆಗೆ ಲಭ್ಯ. ಹಣ್ಣಿನ ಸರಾಸರಿ ತೂಕ 400-600 ಗ್ರಾಂಗಳು. ಇತರ ತಳಿಗಳು ? ಬಂಗನಪಲ್ಲಿ ? ಕೇಸರ್ ? ನೀಲಂ ? ಮಲ್ಲಿಕಾ ? ಮಲ್ಗೋವಾ
ಅಂಕೋಲಾದ ಪೂಜಗೇರಿ, ಹೊಸಗದ್ದೆ, ಶಿರೂರು, ಬಾಸಗೋಡ, ಬೆಳಂಬಾರ ಗ್ರಾಮಗಳ 70ರಿಂದ 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಕರಿ ಈಶಾಡ ಮಾವು ವಿಶೇಷ ರುಚಿಯನ್ನು ಹೊಂದಿದ್ದು, 2023ರಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿದೆ. ಹಾಲಕ್ಕಿ ಸಮುದಾಯದವರು ಹೆಚ್ಚಾಗಿ ಬೆಳೆಯುತ್ತಾರೆ. ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಅಪ್ಪೆ, ಅಪ್ಪೆಕಾಯಿ, ಅಪ್ಪೆಮಿಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದೊಂದು ವೈಶಿಷ್ಟ್ಯಪೂರ್ಣವಾದ ಉಪ್ಪಿನಕಾಯಿಗೆಂದೇ ಬಳಸುವ ಮಾವು. ಇವು ಸುವಾಸನೆಭರಿತವಾಗಿ ಹಾಗೂ ರುಚಿಕರವಾಗಿದ್ದು ಉಪ್ಪಿನಕಾಯಿ ಮಾಡಲು ಬಳಸಲಾಗುತ್ತದೆ. ಅಪ್ಪೆಮಾವು ಜೀರಿಗೆ ಸುವಾಸನೆ, ಕರ್ಪರದ ಸುವಾಸನೆ ಮುಂತಾದ ವಿವಿಧ ಸುವಾಸನೆಗಳಲ್ಲಿ ದೊರಕುತ್ತದೆ. ಅಪ್ಪೆಮಾವಿನ ಅತ್ಯುತ್ತಮ ತಳಿಗಳನ್ನು ಅವುಗಳ ರುಚಿ, ಆಕಾರ, ಗಾತ್ರ, ಸುವಾಸನೆ, ಬಾಳಿಕೆ ಅವಧಿ, ಹಣ್ಣಿನ ತಿರುಳುಬಣ್ಣ, ಅಷ್ಟೆ ಅಲ್ಲದೆ ಕಟಾವಿನ ಸಮಯದಿಂದ ಗುರುತಿಸುತ್ತಾರೆ. ಅಪ್ಪೆಮಿಡಿಯ ಹೂವು ಹಾಗೂ ಕಾಯಿ ಆಗಲು ಅತಿ ಹೆಚ್ಚು ತೇವಾಂಶಭರಿತ ವಾತಾವರಣ ಬೇಕಾಗುತ್ತದೆ.
ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್ಪೇಟೆ, ಬೆಳಗಾವಿ ಜಿಲ್ಲೆಯ ಖಾನಾಪುರ, ಲೋಂಡಾ ಮತ್ತು ಚಿತ್ತೂರು, ಧಾರವಾಡ ಜಿಲ್ಲೆಯ ಕಲಘಟಗಿ ಪ್ರದೇಶಗಳು ಅಪ್ಪೆಮಿಡಿಯ ತಳಿಗಳಿಗೆ ಹೆಸರಾಗಿವೆ. ಅಪ್ಪೆಮಾವಿನ ಮರ ಒಂದು ವರ್ಷಕ್ಕೆ ಸರಾಸರಿ 5000ದಿಂದ 10000ವರೆಗೆ ಮಿಡಿಗಳನ್ನು ಬಿಡುತ್ತದೆ. ಕಾಯಿಯು ಹಣ್ಣಾದಮೇಲೆ ಸ್ವಲ್ಪ ಸಿಹಿಯಾದ ರುಚಿಯನ್ನು ಪಡೆದುಕೊಳ್ಳುವುದಕ್ಕೆ ‘ಜೀರಿಗೆ ಮಿಡಿ’ ಹಾಗೂ ಹುಳಿಯ ಅಂಶವನ್ನೇ ಇಟ್ಟುಕೊಳ್ಳುವುದಕ್ಕೆ ’ಅಪ್ಪೆಮಿಡಿ’ ಎಂದು ಕರೆಯುತ್ತಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿಯೇ 300ಕ್ಕೂ ಹೆಚ್ಚಿನ ಅಪ್ಪೆ ತಳಿಗಳು ಇವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ನೂರಾರು ಮಿಡಿಮಾವಿನ ತಳಿಗಳಿದ್ದು, ಪ್ರತಿ ಜಿಲ್ಲೆಯಲ್ಲಿ 25-30ರಷ್ಟು ಗೊಂಚಲು ಫಲ ನೀಡುವ ಕೃಷಿಯೋಗ್ಯ ತಳಿಗಳಿವೆ. ಕೆಲವು ತಳಿಗಳಿಗೆ ಅವುಗಳನ್ನು ಬೆಳೆಸಿದ ಕುಟುಂಬದ ನಿರ್ದಿಷ್ಟ ಹೆಸರುಗಳೂ ಇವೆ. ಅನಂತಭಟ್ಟ ಅಪ್ಪೆ, ಮಾಳಂಜಿ ಅಪ್ಪೆ, ಹಳದೋಟ ಅಪ್ಪೆ, ಕರ್ಪರ ಅಪ್ಪೆ, ಚೌತಿ ಅಪ್ಪೆ, ಕೆಂಗ್ಲೆ ಬಿಳಿ ಅಪ್ಪೆ, ಭೀಮನಗುಂಡಿ ಅಪ್ಪೆ, ಅಡ್ಡೇರಿ ಜೀರಿಗೆ, ಚೆನ್ನಿಗನತೋಟ ಜೀರಿಗೆ, ಕೂರಂಬಳ್ಳಿ ಜೀರಿಗೆ, ದೊಂಬೆಸರ ಜೀರಿಗೆ, ಜೇನಿ ಜೀರಿಗೆ, ಅಡ್ಡೇರಿ ಜೀರಿಗೆ, ಪಡವಗೋಡು ಜೀರಿಗೆ, ಕಾಳಿಗುಂಡಿ ಅಪ್ಪೆ, ಭೀಮನಕೋಣೆ ಕೆಂಚಪ್ಪೆ, ಜಲ್ಲೆ ಅಪ್ಪೆ, ಸೂಡೂರು, ಲಕ್ಷ್ಯ, ಅಪ್ಪೆ, ಕರ್ಣಕುಂಡಲ, ಹಾರ್ನಳ್ಳಿ ಅಪ್ಪೆ, ಕಂಚಪ್ಪೆ, ಹೊಸಗದ್ದೆ ಅಪ್ಪೆ, ಗೆಣಸಿನಕುಳಿ ಜೀರಿಗೆ,ಅಂಡಗಿ ಅಪ್ಪೆ. ಕಣಗಲಕೈ ಅಪ್ಪೆ ಮುಂತಾದ ಹೆಸರಿನ ಅಪ್ಪೆ ತಳಿಗಳಿವೆ.
ದಶೇಹರಿ ಹಾಗೂ ನೀಲಂನಿಂದ ಪಡೆದಿರುವ ಹೈಬ್ರಿಡ್ ತಳಿ ಇದು.
ದಕ್ಷಿಣ ಭಾರತದಲ್ಲಿ ಬಹಳ ಹೆಸರುವಾಸಿ. ಪೈರಿ, ಕಲಮಿ ಎಂದೂ ಕರೆಯುತ್ತಾರೆ. ಹಣ್ಣುಗಳು ಹೆಚ್ಚು ತೂಕ, ಸಾಧಾರಣ ಗಾತ್ರ ಹೊಂದಿವೆ.