ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರ 74 ವರ್ಧಂತ್ಯೋತ್ಸವದ ಅಂಗವಾಗಿ ತಾಲೂಕು ಬ್ರಾಹ್ಮಣ ಸಮಾಜದಿಂದ ಹಣ್ಣು-ಬಿಸ್ಕೆಟ್‌ಗಳನ್ನು ವಿತರಿಸಲಾಯಿತು. ಡಾ.ಉಮೇಶ್, ಶ್ರೀನಿವಾಸ್, ಣೀರಾಜು, ಗಿರೀಶ್, ಶಿವಶಂಕರ್, ಭರತ್, ಜೋಷಿ ಮತ್ತಿತರಿದ್ದರು. 
ನ್ಯೂಸ್

ರೋಗಿಗಳಿಗೆ ಹಣ್ಣು ವಿತರಣೆ

ಕಡೂರು: ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರ 74ನೇ ವರ್ಧಂತ್ಯೋತ್ಸವದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ತಾಲೂಕು ಬ್ರಾಹ್ಮಣ ಸಮಾಜದಿಂದ ಹಣ್ಣು-ಬಿಸ್ಕೆಟ್‌ಗಳನ್ನು ವಿತರಿಸಲಾಯಿತು.
ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಶ್ರೀಗಳ ವರ್ಧಂತ್ಯೋತ್ಸವದ ಪ್ರಯುಕ್ತ ಸೇವಾ ಕಾರ್ಯವಾಗಿ ಸಮಾಜದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳ ಅನುಗ್ರಹ ಪ್ರತಿಯೊಬ್ಬ ಭಕ್ತರಿಗೂ ದೊರಕಬೇಕಿದೆ ಎಂಬುದು ನಮ್ಮೆಲ್ಲರ ಆಶಯ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಮೇಶ್, ಬ್ರಾಹ್ಮಣ ಸಮಾಜದ ಮುಖಂಡರಾದ ಎ.ಎಸ್.ಣಿರಾಜು, ಗಿರೀಶ್, ಎಚ್.ಎನ್. ಶಿವಶಂಕರ್, ಕೃಷ್ಣಮೂರ್ತಿ ಜೋಷಿ, ವಾದಿರಾಜ್, ಶಶಿಕಾಂತ್, ಭರತ್, ರಾಘವೇಂದ್ರ, ಗಾಯತ್ರಿ, ರೋಹಿಣಿ, ಸುಮಾ, ರಾಮು, ಶ್ರೀಕಾಂತ್, ರಾಮಚಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷ ಆನಂದಮೂರ್ತಿ ಭಾರದ್ವಾಜ್, ವಿನಯ್‌ಭಟ್ ಮತ್ತಿತರರಿದ್ದರು.