ನವದೆಹಲಿ: ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್ನಲ್ಲಿ 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆ(IAF)ಯ ಎಎನ್-12 ವಿಮಾನ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹುತಾತ್ಮರಾಗಿದ್ದ ನಾಲ್ವರು ಯೋಧರ ಮೃತದೇಹಗಳು ಈಗ ಪತ್ತೆಯಾಗಿವೆ.
ಇದನ್ನು ಓದಿ: ದೇವಸ್ಥಾನವಿರಲಿ, ದರ್ಗಾವೇ ಆಗಿರಲಿ..; ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂ ಹೇಳಿದ್ದು ಹೀಗೆ.. | Bulldozer Action
ಭಾರತದ ದೀರ್ಘಾವಧಿಯ ಶೋಧ ಕಾರ್ಯಾಚರಣೆಯೊಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತ್ರಿವರ್ಣ ಮೌಂಟೇನ್ ಪಾರುಗಾಣಿಕಾ ಸಿಬ್ಬಂದಿಗಳ ಜಂಟಿ ತಂಡವು ಮೃತದೇಹಗಳನ್ನು ವಶಪಡಿಸಿಕೊಂಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೃತದೇಹಗಳು ಸುಮಾರು 16 ಸಾವಿರ ಅಡಿ ಎತ್ತರದ ಹಿಮನದಿಯ ಅಡಿಯಲ್ಲಿದ್ದವು. ಪಯೋನಿಯರ್ ಕಾರ್ಪ್ಸ್ ಸೈನಿಕ ಮಲ್ಖಾನ್ ಸಿಂಗ್, ಇನ್ನೊಬ್ಬರ ಹೆಸರು ನಾರಾಯಣ್ ಸಿಂಗ್ ಅವರು ಆರ್ಮಿ ಮೆಡಿಕಲ್ ಕಾರ್ಪ್ಸ್, ಇದಲ್ಲದೇ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಥಾಮಸ್ ಚರಣ್ ಈ ಮೂವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 10 ರವರೆಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುವುದು. ಹಿಮನದಿಯಲ್ಲಿ ಸಮಾಧಿಯಾಗಿರುವ ಹೆಚ್ಚಿನ ಮೃತ ದೇಹಗಳು ಪತ್ತೆಯಾಗುವ ಸಾಧ್ಯತೆಯಿದೆ. ಮಲ್ಖಾನ್ ಸಿಂಗ್ ಅವರ ಜೇಬಿನಲ್ಲಿ ಸಿಕ್ಕ ಚೀಟಿಯ ಮೂಲಕ ಗುರುತಿಸಲಾಗಿದೆ. ಇದಲ್ಲದೆ ನಾರಾಯಣ್ ಸಿಂಗ್ ಮತ್ತು ಚರಣ್ ಅವರ ಬಳಿ ಇದ್ದ ಪೇಬುಕ್‌ಗಳಿಂದ ಅವರನ್ನು ಗುರುತಿಸಲಾಗಿದೆ. ಈ ಬಗ್ಗೆ ಯೋಧರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸೇನಾ ಅಧಿಕಾರಿಗಳು ಹೇಳಿದರು.
1968 ಫೆಬ್ರವರಿ 7ರಂದು ಸೋವಿಯತ್ ಮಿಲಿಟರಿ ಸಾರಿಗೆ ವಿಮಾನವು ಅಪಘಾತಕ್ಕೀಡಾಯಿತು. ಇದರ ಅವಶೇಷಗಳು ಮೊದಲ ಬಾರಿಗೆ 2003ರಲ್ಲಿ ಕಾಣಿಸಿಕೊಂಡವು. ಇದರ ನಂತರ 2019ರಲ್ಲಿ ಐದು ಮೃತ ದೇಹಗಳು ಪತ್ತೆಯಾಗಿವೆ. ಇದುವರೆಗೆ ಒಟ್ಟು 9 ಮೃತದೇಹಗಳು ಪತ್ತೆಯಾಗಿವೆ. ಆದರೆ ಅಪಘಾತದ ಸಮಯದಲ್ಲಿ ವಿಮಾನದಲ್ಲಿ 102 ಸೈನಿಕರು ಇದ್ದರು.
ಈ ವಿಮಾನವು ಚಂಡೀಗಢದಿಂದ ಟೇಕಾಫ್ ಆಗಿದ್ದು ಲೇಹ್‌ನಲ್ಲಿ ಇಳಿಯಬೇಕಿತ್ತು. 21 ವರ್ಷಗಳ ಹಿಂದೆ ಅದರ ಅವಶೇಷಗಳು ಪತ್ತೆಯಾದ ನಂತರ ಹಲವಾರು ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು. 2005, 2006, 2013 ಮತ್ತು 2019ರಲ್ಲಿ ಡೋಗರ್ ಸ್ಕೌಟ್ಸ್ ಇಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು. ಈ ಬಾರಿ ಡೋಗ್ರಾ ಸ್ಕೌಟ್ ಅದ್ಭುತಗಳನ್ನು ಮಾಡಿದೆ.
2003ರಲ್ಲಿ AN-12ರ ಅವಶೇಷಗಳು ಕಂಡುಬಂದಾಗ. ಐದು ವರ್ಷಗಳ ಹಿಂದೆ ವಿಮಾನದ ಎರಡು ಏರೋ ಎಂಜಿನ್‌ಗಳು, ಫ್ಯೂಸ್ಲೇಜ್, ಇಂಧನ ಟ್ಯಾಂಕ್ ಮತ್ತು ಕಾಕ್‌ಪಿಟ್ ಬಾಗಿಲು ಪತ್ತೆಯಾಗಿತ್ತು. ಸೆಪ್ಟೆಂಬರ್ 18ರಂದು ಭಾರತೀಯ ಸೇನೆಯು TMR ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು, ಅದರ ಅಡಿಯಲ್ಲಿ ಪರ್ವತಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಪ್ರಯತ್ನಗಳನ್ನು ಮಾಡಲಾಗುವುದು. ಈ ಒಪ್ಪಂದದ ಅಡಿಯಲ್ಲಿ ಹಿಮಕುಸಿತಗಳನ್ನು ಎದುರಿಸಲು ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಸೇನೆಗೆ ತರಬೇತಿ ನೀಡಲಾಗುವುದು.(ಏಜೆನ್ಸೀಸ್)