ತರೀಕೆರೆಯ ನೇರಲಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣ ಶಿಬಿರವನ್ನು ಯೋಜನಾಧಿಕಾರಿ ಕೆ.ಕುಸುಮಧರ್ ಉದ್ಘಾಟಿಸಿದರು. ಶೋಭಾ, ಮಲ್ಲಿಕಾರ್ಜುನ, ನಂದಿನಿ, ಉಷಾ ಇತರರಿದ್ದರು. 
ನ್ಯೂಸ್

ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಿ

ತರೀಕೆರೆ:ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೆ.ಕುಸುಮಧರ್ ಹೇಳಿದರು.
ತಾಲೂಕಿನ ನೇರಲಕೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ತರಬೇತಿಗಳಿಲ್ಲದೇ ಯಾವುದೇ ಉದ್ಯೋಗ ಕೈಗೊಳ್ಳಲಾಗದು. ಹೀಗಾಗಿ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಬೇಕು. ಯೋಜನೆಯಿಂದ ಪಡೆದ ಪ್ರಗತಿ ನಿಧಿಯನ್ನು ಇಂಥ ಕೆಲಸಕ್ಕೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯೆ ಶೋಭಾ, ಪಿಡಿಒ ಮಲ್ಲಿಕಾರ್ಜುನ್, ಯೋಜನೆ ಮೇಲ್ವಿಚಾರಕ ಹೇಮ್ಲಾನಾಯ್ಕ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಂದಿನಿ, ಸೇವಾ ಪ್ರತಿನಿಧಿ ಉಷಾ ಮತ್ತಿತರರಿದ್ದರು.