ಮುಂಬೈ: ಭಾರತದ ಅತಿದೊಡ್ಡ ಎಎಫ್ಎಂಸಿಜಿ ಬ್ರ್ಯಾಂಡ್ ಹಿಂದುಸ್ತಾನ್ ಯೂನಿಲಿವರ್ (ಎಚ್ಯುಎಲ್) ತನ್ನ ಎಲ್ಲ ಉತ್ಪನ್ನಗಳ ಬೆಲೆಯನ್ನು ಶೇಕಡ 15ರಷ್ಟು ಏರಿಕೆ ಮಾಡಿದೆ. ಪಿಯರ್ಸ್ ಸಾಬೂನು (125 ಗ್ರಾಂ) ದರ ಶೇಕಡ 2.4 ಮತ್ತು ಮಲ್ಟಿ ಪ್ಯಾಕ್ ದರ ಶೇಕಡ 3.7 ಏರಿದೆ. ಲಕ್ಸ್ ಸಾಬೂನು ದರ ಕೆಲವು ಮಲ್ಟಿ ಪ್ಯಾಕ್ ಮಾದರಿಯ ದರ ಶೇಕಡ 9 ಏರಿದೆ. ಎಚ್ಯುಎಲ್ ತನ್ನ ಚರ್ಮ ರಕ್ಷಣೆ ಮತ್ತು ಇತರೆ ಉತ್ಪನ್ನಗಳ ದರವನ್ನು ಶೇಕಡ 3 ರಿಂದ 20ರ ತನಕ ಏರಿಕೆ ಮಾಡಿದೆ.
ಸನ್ಸಿಲ್ಕ್ ಶ್ಯಾಂಪೂ ವಿವಿಧ ಮಾದರಿಯವಕ್ಕೆ 8 ರೂಪಾಯಿಂದ 10 ರೂಪಾಯಿ ತನಕ ಬೆಲೆ ಏರಿಸಲಾಗಿದೆ. ಕ್ಲಿನಿಕ್ ಪ್ಲಸ್ ಶ್ಯಾಂಪೂ 100 ಎಂಲ್ ದರ ಶೇಕಡ 15, ಗ್ಲೋ ಆ್ಯಂಡ್ ಲವ್ಲೀ ದರ ಶೇಕಡ 6&8, ಪಾಂಡ್ಸ್ ಟಾಲ್ಕಂ ಪೌಡರ್ ದರ ಶೇಕಡ 5&7ದರ ಏರಿಕೆ ಆಗಿದೆ. ಎಚ್ಯುಎಲ್ ಏಪ್ರಿಲ್ನಲ್ಲಿ ತನ್ನೆಲ್ಲ ಉತ್ಪನ್ನಗಳ ಬೆಲೆಯನ್ನು ಏರಿಸಿತ್ತು. ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಇಂತಹ ಸನ್ನಿವೇಶ ಇದೇ ಮೊದಲು. ಇಷ್ಟಾದರೂ ಎ್ಎಂಸಿಜಿಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿಯೇ ಉಳಿಯಲಿದೆ. ಹಣದುಬ್ಬರ ಪ್ರಮಾಣ ಕಡಿಮೆ ಮಾಡಲು ಆರ್ಬಿಐ ಮೇ 4ರಂದು ತುರ್ತು ಕ್ರಮಗಳನ್ನು ಘೋಷಿಸಿದ್ದು, ರೆಪೋ ದರವನ್ನು 40 ಮೂಲಾಂಶ ಏರಿಸಿದೆ. ಸಿಆರ್ಆರ್ ದರವನ್ನು 50 ಮೂಲಾಂಶ ಏರಿಸಿದೆ. ಇದು ಅರ್ಥ ವ್ಯವಸ್ಥೆಗೆ ಬಲವನ್ನು ತುಂಬಲಿದೆ ಎಂದು ಎಚ್ಯುಎಲ್ ಸಿಇಒ ಮತ್ತು ಎಂಡಿ ಸಂಜೀವ್ ಮೆಹ್ತಾ ಹೇಳಿದರು.