ರಾಣೆಬೆನ್ನೂರ: ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ವತಿಯಿಂದ ತಾಲೂಕಿನ ಹಿರೇಬಿದರಿ ಗ್ರಾಪಂನಲ್ಲಿ ಶನಿವಾರ ನೇತ್ರ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.
ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರಾದ ಡಾ. ಸುನೀಲ ಮತ್ತು ಸುರೇಶ ನೇತೃತ್ವದ ನೇತ್ರಾಧಿಕಾರಿಗಳ ತಂಡ ಕಣ್ಣಿನ ತಪಾಸಣೆ ನಡೆಸಿದರು. 150ಕ್ಕೂ ಅಧಿಕ ಚಿಕಿತ್ಸೆ ಪಡೆದುಕೊಂಡರು. ಅವರಿಗೆ ಕನ್ನಡಕ ನೀಡಲಾಯಿತು. 35 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.