ಸೊರಬ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಬಿಳ್ಕೋಡುಗೆ ಮತ್ತು ನೂತನ ಸಿಬ್ಬಂದಿಗೆ ಸ್ವಾಗತ ಕಾರ್ಯಕ್ರಮವನ್ನು ಬಿಎಸ್‌ಎನ್‌ಎಲ್ ನಿವೃತ್ತ ನೌಕರ ವೇಣುಗೋಪಾಲ್ ಮತ್ತಿತರರು ಉದ್ಘಾಟಿಸಿದರು. ಡಾ. ಕೆ.ಪ್ರಭು ಸಾಹುಕಾರ್, ಡಾ. ನೂತನ್ ನಾಯ್ಕ ಇತರರಿದ್ದರು.  
ನ್ಯೂಸ್

ಸೌಹಾರ್ದದ ಸೇವೆ ಎಂದಿಗೂ ಸ್ಮರಣೀಯ

ಶಿವಕುಮಾರ ಎಸ್.ಪಿ.

ಸೊರಬ: ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಸಹಜವಾದುದು. ನಮ್ಮ ಸೇವಾವಧಿಯಲ್ಲಿ ಕೊನೆವರೆಗೆ ಉಳಿಯುವುದು ಭಾವನಾತ್ಮಕ ಸಂಬಂಧ ಮಾತ್ರ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಪ್ರಭು ಸಾಹುಕಾರ್ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ವರ್ಗಾವಣೆಗೊಂಡ ಸಿಬ್ಬಂದಿಗೆ ಬೀಳ್ಕೊಡುಗೆ ಮತ್ತು ಸೊರಬ ಆಸ್ಪತ್ರೆಗೆ ವರ್ಗವಾಗಿ ಬಂದಿರುವ ನೂತನ ಸಿಬ್ಬಂದಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದ ಆಸ್ಪತ್ರೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದಂತೆಯೇ ವರ್ಗವಾಗಿ ಹೋಗಿರುವ ಸ್ಥಳದಲ್ಲಿಯೂ ಉತ್ತಮ ಸೇವೆ ಸಲ್ಲಿಸಿ ಮನ್ನಣೆ ಪಡೆಯಬೇಕು. ವರ್ಗವಾಗಿ ಬಂದಿರುವವರು ಸಹ ಉತ್ತಮ ಸೇವೆ ನೀಡಿದರೆ ಆಸ್ಪತ್ರೆಯ ಘನತೆ ಇನ್ನಷ್ಟು ಹೆಚ್ಚುತ್ತದೆ. ಸಿಬ್ಬಂದಿ ಅನ್ಯೋನ್ಯವಾಗಿ ಮಾಡುವ ಸೇವೆ ಎಂದಿಗೂ ಸ್ಮರಣೀಯ ಎಂದರು.

ಬಿಎಸ್‌ಎನ್‌ಎಲ್ ನಿವೃತ್ತ ನೌಕರ ವೇಣುಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯ ಭೂಷಣ ಪ್ರಶಸ್ತಿ ಪುರಸ್ಕೃತ ಎನ್.ಎಲ್.ಅಮಿತಾ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ನೂತನ್ ನಾಯ್ಕ, ಡಾ. ದಯಾನಂದ ಕುಮಾರ್, ಸಹಾಯಕ ಆಡಳಿತಾಧಿಕಾರಿ ಚನ್ನಮ್ಮ, ತಿರುಮಲೇಶ್, ಆರೋಗ್ಯ ಸಮಿತಿ ಸದಸ್ಯರಾದ ಸತ್ಯನಾರಾಯಣ, ರವಿ ಕಲ್ಲಂಬಿ, ಮುಡುಪಣ್ಣ, ಬಸವೇಶ್, ಕಮಲಾಕ್ಷಿ, ನಾಗರಾಜ್, ಪ್ರಮೋದ್, ಶಿಲ್ಪಾ ಬೋರ್ಕರ್ ಇತರರಿದ್ದರು.