ನವದೆಹಲಿ: ಭಾರತದ 14ನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ (Manmohan Singh) ದೇಶ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞರಾಗಿದ್ದರು. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಹೊಂದಿರುವ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಮನಮೋಹನ್ ಸಿಂಗ್ರನ್ನು ನೆನೆದು ಭಾವುಕ ಪತ್ರ ಒಂದನ್ನು ಬರೆದಿದ್ದಾರೆ.
ಮನಮೋಹನ್ ಸಿಂಗ್ (Manmohan Singh) ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಸೋನಿಯಾ ಗಾಂಧಿ (Sonia Gandhi) ಸುದೀರ್ಘ ಪತ್ರ ಒಂದನ್ನು ಬರೆದಿದ್ದಾರೆ. ಈ ಪತ್ರವನ್ನು ಎಐಸಿಸಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅವರು ನನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ನಡವಳಿಕೆಯಲ್ಲಿ ತುಂಬಾ ಸೌಮ್ಯರಾಗಿದ್ದ ಅವರು ಆಳವಾದ ನಂಬಿಕೆಗಳಲ್ಲಿ ದೃಢನಿಶ್ಚಯ ಹೊಂದಿದ್ದಾರೆ. ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅವರ ಬದ್ಧತೆ ಅಚಲವಾಗಿತ್ತು.
ಮನಮೋಹನ್ ಸಿಂಗ್ ಅವರು ನನ್ನ ಸೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ. ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಮನಮೋಹನ್ ಸಿಂಗ್ ಸಲ್ಲಿಸಿರುವ ಅಪಾರವಾದ ಕೊಡುಗೆಯನ್ನು ಅಳೆಯಲಾಗದು. ಅವರಂತಹ ನಾಯಕರನ್ನು ಹೊಂದಿದ್ದಕ್ಕಾಗಿ ಇಡೀ ದೇಶ ಮತ್ತು ನಮ್ಮ ಪಕ್ಷ ಹೆಮ್ಮೆಪಟ್ಟುಕೊಳ್ಳುತ್ತಿದ್ದು, ಕೃತಜ್ಞರಾಗಿದ್ದೇವೆ.
ದೇಶಕ್ಕಾಗಿ ಹೃದಯವಂತಿಕೆ ಮತ್ತು ಮನಸ್ಸಿನಿಂದ ಮನಮೋಹನ ಸಿಂಗ್ ಸೇವೆ ಸಲ್ಲಿಸಿದ್ದರು. ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಮನಮೋಹನ್ ಅವರ ಮೇಲೆ ಪ್ರೀತಿ ಅಡಗಿದೆ. ನನ್ನ ಪಾಲಿಗೆ ಮನಮೋಹನ್ ಸಿಂಗ್ ಅವರ ನಿಧನವು ವೈಯಕ್ತಿಕ ನಷ್ಟವಾಗಿದೆ ಎಂದು ಸೋನಿಯಾ ಗಾಂಧಿ (Sonia Gandhi) ಮನಮೋಹನ್ ಸಿಂಗ್ರನ್ನು (Manmohan Singh) ನೆನದು ಭಾವುಕ ಪತ್ರ ಬರೆದಿದ್ದಾರೆ.