ನ್ಯೂಸ್

ನಿಂತಿಲ್ಲ ಈಶಾನ್ಯ ದೆಹಲಿ ಹಿಂಸಾಚಾರ: ಮಂಗಳವಾರವೂ ಬೆಳಗ್ಗೆ ನಡೆಯಿತು ಕಲ್ಲು ತೂರಾಟ, ಆಸ್ತಿಪಾಸ್ತಿ ಹಾನಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಸೋಮವಾರ ರಾತ್ರಿ ಹಿಂಸಾಚಾರಕ್ಕೆ ಇಳಿದ ಪರಿಣಾಮ, ಒಬ್ಬ ಪೊಲೀಸ್ ಪೇದೆ ಸೇರಿ ನಾಲ್ವರು ರಾತ್ರಿಯೇ ಮೃತಪಟ್ಟಿದ್ದರು. ಮಂಗವಾರ ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಕಾನೂನು ಸುವ್ಯವಸ್ಥೆ ಮತ್ತು ಶಾಂತಿಪಾಲನೆ ಕಾಪಾಡಲು ಭದ್ರತಾ ಪಡೆ ಕಾರ್ಯನಿರ್ವಹಿಸುತ್ತಿದೆ. ಈ ನಡುವೆ, ಮಂಗಳವಾರ ಬೆಳಗ್ಗೆಯೂ ಜನರ ಗುಂಪು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ಕಲ್ಲು ತೂರಾಟ ಕೂಡಾ ಮಾಡಿದೆ. ಈ ದುಂಡಾವರ್ತನೆ ದೆಹಲಿಯ ಮೌಜ್​ಪುರ, ಬ್ರಹ್ಮಪುರಿ ಪ್ರದೇಶದಲ್ಲಿ ನಡೆದಿದೆ.

ಸೋಮವಾರದ ಹಿಂಸಾಚಾರದಲ್ಲಿ ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದ್ದು, 65ಕ್ಕೆ ಏರಿಕೆಯಾಗಿದೆ. 45 ಬೆಂಕಿ ಹಚ್ಚಿದ ಪ್ರಕರಣಗಳನ್ನು ಅಗ್ನಿಶಾಮಕ ಸೇವೆ ದಾಖಲಿಸಿಕೊಂಡಿದೆ. ಒಂದು ಅಗ್ನಿಶಾಮಕ ವಾಹನದ ಮೇಲೂ ಪ್ರತಿಭಟನಾಕಾರರು ಕಲ್ಲೆಸೆದ ಪ್ರಕರಣವೂ ದಾಖಲಾಗಿದೆ. ಪರಿಣಾಮ ಐವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್)