ನ್ಯೂಸ್

ಪ್ರಜ್ವಲ್ ರೇವಣ್ಣಗೆ ಉಚಿತ ಕಾನೂನು ಸೇವೆ

ಬೆಂಗಳೂರು: ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಉಚಿತ ವಕೀಲರನ್ನು ನೇಮಕ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಜ್ವಲ್ ರೇವಣ್ಣ ಪರ ವಕೀಲರು ಹಿಂದೆ ಸರಿದ ಹಿನ್ನೆಲೆಯಲ್ಲಿ ಹೊಸ ವಕೀಲರ ನೇಮಕಕ್ಕೆ ಸಮಯ ಕೊಡಬೇಕೆಂದು ಕೋರಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, ಮಂಗಳವಾರ ವಿಚಾರಣೆ ಕೈಗೊಂಡು ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಟ್ರಯಲ್ ಪ್ರಾರಂಭ ಮಾಡಲು ನನ್ನ ಬಳಿ ವಕೀಲರು ಇಲ್ಲ ಎಂದು ಪ್ರಜ್ವಲ್ ರೇವಣ್ಣ ಎಂದು ಕೋರ್ಟ್ ಗಮನಕ್ಕೆ ತಂದರು. ನಿಮಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿತ್ತು ಎಂದು ಮನವಿಯನ್ನು ತಿರಸ್ಕರಿಸಿತು. ಕೊನೆಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ಒದಗಿಸಲು ವಕೀಲೆ ಆರ್.ಎಸ್. ಜಯಶ್ರೀ ಅವರನ್ನು ಪ್ರಜ್ವಲ್ ಪರ ವಾದಕ್ಕೆ ನಿಯೋಜನೆ ಮಾಡಿತು. 2 ತಿಂಗಳಲ್ಲಿ ಟ್ರಯಲ್ ಮುಗಿಸುವುದಾಗಿ ಕೋರ್ಟ್ ಸೂಚಿಸಿ ಮೇ 2ಕ್ಕೆ ವಿಚಾರಣೆ ಮುಂದೂಡಿದರು.