ಸೋಮವಾರಪೇಟೆ ತಾಲೂಕಿನ ಕಾಗಡಿಕಟ್ಟೆ ಆಯುಷ್ಮನ್ ಆರೋಗ್ಯ ಮಂದಿರದಲ್ಲಿ ನಡೆದ ನೇತ್ರ ಉಚಿತ ತಪಾಸಣೆ ಶಿಬಿರದಲ್ಲಿ ವೈದ್ಯೆ ಪ್ರೀತಿ ನೇತ್ರ ಪರೀಕ್ಷೆ ಮಾಡಿದರು. 
ನ್ಯೂಸ್

ಕಾಗಡಿಕಟ್ಟೆಯಲ್ಲಿ ನೇತ್ರ ಉಚಿತ ತಪಾಸಣೆ

ಸೋಮವಾರಪೇಟೆ: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಕಾಗಡಿಕಟ್ಟೆ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರ ಸೋಮವಾರ ನಡೆಯಿತು.

52 ಗ್ರಾಮೀಣ ಜನರು ನೇತ್ರ ಪರೀಕ್ಷೆ ಮಾಡಿಸಿಕೊಂಡರು. 10 ವೃದ್ಧರಿಗೆ ಕಣ್ಣಿನ ಪೊರೆ ಇದ್ದು, ಅವರನ್ನು ಅಮ್ಮ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿ, ಆಸ್ಪತ್ರೆಯ ವಾಹನದಲ್ಲೇ ಮಂಗಳವಾರ ವಾಪಸ್ ತಂದು ಬಿಡಲಾಯಿತು.

ನೇತ್ರ ತಜ್ಞರಾದ ಸಂದೀಪ್, ಪ್ರೀತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದಿವ್ಯಾ, ಸಮುದಾಯ ಆರೋಗ್ಯ ಅಧಿಕಾರಿ ಧರಣೇಶ್ ರಾಜ್ ಇದ್ದರು.