ಕೊಳ್ಳೇಗಾಲದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 33ನೇ ತಿಂಗಳ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ದೃಷ್ಟಿ ಸಮಸ್ಯೆಯಿದ್ದವರನ್ನು ವ್ಯೆದ್ಯರು ತಪಾಸಣೆ ಮಾಡಿದರು. ಪ್ರೇಮಲತಾ ಕೃಷ್ಣಸ್ವಾಮಿ, ರಾಜೇಶ್ ಇತರರು ಇದ್ದರು. 
ನ್ಯೂಸ್

ಕಣ್ಣಿನ ಉಚಿತ ತಪಾಸಣೆ ಶಿಬಿರ

ಎಂ.ರವಿ

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಎಚ್.ಕೆ.ಟ್ರಸ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು ಕೊಳ್ಳೇಗಾಲ, ರೋಟರಿ ಮಿಡ್‌ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ 33ನೇ ತಿಂಗಳ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಯಿತು.

ಶಿಬಿರಕ್ಕೆ ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಚಾಲನೆ ನೀಡಿದರು. ಶಿಬಿರದಲ್ಲಿ 125 ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಪೈಕಿ 71 ಜನರನ್ನು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಈ ವೇಳೆ ಅರವಿಂದ ಕಣ್ಣಿನ ಆಸ್ಪತ್ರೆಯ ವ್ಯೆದ್ಯರಾದ ಡಾ.ಸುಜಯ್ ಜಾರ್ಜ್, ಡಾ.ಗೋರಂಗ್‌ಕುಮಾರ್, ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿಜಯ್‌ಕುಮಾರ್ ಹಾಗೂ ಸಿಬ್ಬಂದಿ, ವಿಶ್ವ ಚೇತನ ಸಮೂಹ ಸಂಸ್ಥೆಯ ಸಂಯೋಜಕ ರಾಜೇಶ್, ಸಂಸ್ಥೆಯ ಸಿಬ್ಬಂದಿ ಕುಮಾರಿ ಚೈತ್ರಾ, ಶಾಂತಕುಮಾರ್ ಮತ್ತಿತರರಿದ್ದರು.