ಮುದ್ದೇಬಿಹಾಳ: ಅಭ್ಯುದಯ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಂ.ಎನ್​.ಮದರಿ, ಶ್ರೀದೇವಿ ಮದರಿ, ರವಿ ಜಗಲಿ, ಬಿ.ಜಿ.ಬಿರಾದಾರ ಇತರರಿದ್ದರು.  
ನ್ಯೂಸ್

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

Vijayapura - Desk - Shamarao Kulkarni

ಮುದ್ದೇಬಿಹಾಳ: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಎರಡು ವರ್ಷ ಪಿಯುಸಿ ಉಚಿತ ಶಿಣ ಯೋಜನೆ ಮುಂದುವರಿಸಲಾಗುತ್ತಿದಿದ್ದು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದು ನಮ್ಮ ಗುರಿ ಎಂದು ಅಹಿಲ್ಯಾದೇವಿ ಹೋಳ್ಕರ್​ ಶಿಣ ಸಂಸ್ಥೆ ಸಂಸ್ಥಾಪಕ, ತಾಲೂಕು ಕುರುಬರ ಸಂದ ಅಧ್ಯ ಎಂ.ಎನ್​. ಮದರಿ ಹೇಳಿದರು.

ಇಲ್ಲಿನ ಅಭ್ಯುದಯ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಅಹಿಲ್ಯಾದೇವಿ ಹೋಳ್ಕರ್​ ಸ್ಕಾಲರ್​ಶಿಪ್​ ಪರೀೆಯ ಸಾಧಕರ ಪುರಸ್ಕಾರ ಸಮಾರಂಭದ ಅಧ್ಯತೆ ವಹಿಸಿ ಅವರು ಮಾತನಾಡಿದರು.

ಪರೀೆಗೆ 1300 ವಿದ್ಯಾರ್ಥಿಗಳು ಹಾಜರಾಗಿರುವುದು ಸಂತಸ ತಂದಿದೆ. ಉಚಿತ ಶಿಣಕ್ಕಾಗಿ 20 ವಿದ್ಯಾರ್ಥಿಗಳು, ಶೇ.25 ಶುಲ್ಕ ವಿನಾಯಿತಿಗೆ 53, ಶೇ.10 ಶುಲ್ಕ ವಿನಾಯಿತಿ ಪರೀೆಗೆ ಕುಳಿತ ಎಲ್ಲರನ್ನೂ ಆಯ್ಕೆ ಮಾಡಲಾಗಿದೆ ಎಂದರು.

ದಿ ಕರ್ನಾಟಕ ಕೋ ಆಪ್​ ಬ್ಯಾಂಕ್​ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ, ಸಂಸ್ಥೆ ನಿರ್ದೇಶಕ ಕಿರಣ ಮದರಿ, ಸಲಹಾ ಸಮಿತಿ ಸದಸ್ಯ ರವಿ ಜಗಲಿ, ಲೆಕ್ಕ ವ್ಯವಸ್ಥಾಪಕ ಬಸವರಾಜ ಬಿಜ್ಜೂರ, ಪ್ರಾಚಾರ್ಯ ಎಂ.ಎಂ. ಧನ್ನೂರ, ಆರ್​.ಎಸ್​. ಜಡಗಿ, ಮುಖ್ಯಾಧ್ಯಾಪಕರಾದ ಎಚ್​.ಬಿ. ಜಾಯವಾಡಗಿ, ರಮೇಶ ಹರನಾಳ, ಭೀಮಣ್ಣ ಪೂಜಾರಿ, ಉಪನ್ಯಾಸಕ ವೀರೇಶ ಹುಲಿಕೇರಿ, ಮೇಲ್ವಿಚಾರಕಿ ಗೀತಾ ಹುರಕಡ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರಶಾಂತ ಬಿರಾದಾರ, ಎ.ಎ್​. ಬುವಾಜಿ, ಎಚ್​.ಎಸ್​. ಗೌಡರ, ರಂಗಸ್ವಾಮಿ, ರವಿ ಚಲವಾದಿ, ಗುರು ನಾಗರಾಳ, ಸಿಬ್ಬಂದಿ ಪರೀೆ ಯಶಸ್ವಿಯಾಗಿ ನಡೆಸಲು ಸಹಕರಿಸಿದರು.

ಮೊದಲ 5 ಬಹುಮಾನ ಪಡೆದುಕೊಂಡ ವಿದ್ಯಾರ್ಥಿಗಳಾದ ಎಂ.ಡಿ. ಝಿಹಾನ್​, ಜೀವನ್​ ಹುಡೇದ, ರೋಹಿತ್​ ಕುಂಬಾರ, ಸಾಗರ ಪಡೇಕನೂರ, ಹುಣಶ್ಯಾಳದ ರಶ್ಮಿ ನಾಡಗೌಡ ಮತ್ತು ಇವರೊಂದಿಗೆ ಉಚಿತ ಶಿಣ ಸೌಲಭ್ಯಕ್ಕೆ ಆಯ್ಕೆಯಾದ 15 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆ ಆಡಳಿತಾಧಿಕಾರಿ ಬಿ.ಜಿ. ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು.