ನ್ಯೂಸ್

ಪಾಕ್​ ಜತೆ ಸಂಪರ್ಕ ಹೊಂದಿರುವ ನಾಲ್ವರು ಶಂಕಿತ ಉಗ್ರರ ಬಂಧನ, 31 ಜೀವಂತ ಮದ್ದುಗುಂಡುಗಳು ವಶ

ಕರ್ನಾಲ್​​: ಪಾಕಿಸ್ತಾನದ ಜತೆ ಸಂಪರ್ಕ ಹೊಂದಿರುವ ನಾಲ್ವರು ಶಂಕಿತ ಉಗ್ರರನ್ನು ಹರಿಯಾಣ ಪೊಲೀಸರು ಗುರುವಾರ ಬಂಧಿಸಿದ್ದಾರೆ. 

ಪಂಜಾಬ್​ನ ಫೆರೊಜ್​ಪುರ್​ನಲ್ಲಿ ಮೂವರು ಹಾಗೂ ಲೂಧಿಯಾನದಲ್ಲಿ ಓರ್ವ ನನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಂದ ದೇಸಿ ಪಿಸ್ತೂಲ್​​, 31 ಜೀವಂತ ಮದ್ದುಗುಂಡುಗಳ ಹಾಗೂ 1.3 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ರಾಮ್​ ಪೂನಿಯಾ ತಿಳಿಸಿದ್ದಾರೆ.

ಬಂಧಿತರನ್ನು ಗುಪ್ರೀತ್​,ಅಮನ್​ದೀಪ್​, ಪರ್ಮಿಂದರ್ ಮತ್ತು ಭೂಪಿಂದರ್ ಎಂದು ಗುರುತಿಸಲಾಗಿದೆ. ಸದ್ಯ ತನಿಖೆ ಚುರುಕುಗೊಂಡಿದೆ.