ಶ್ರೀನಗರ: ಉಗ್ರರು ನಡೆಸಿರುವ ಗ್ರೆನೇಡ್ ದಾಳಿಯಿಂದಾಗಿ ಇಬ್ಬರು ಭದ್ರತಾ ಸಿಬ್ಬಂದಿಗಳು ಮತ್ತಿಬ್ಬರು ನಾಗರಿಕರು ಗಾಯಾಳುಗಳಾಗಿರುವುದಾಗಿ ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನದ ಹೊತ್ತಿಗೆ ಶ್ರೀನಗರದ ಲಾಲ್ ಚೌಕ್ನ ಬಳಿ ಉಗ್ರರು ಸಿಪಿಆರ್ಎಫ್ ತಂಡದ ಮೇಲೆ ಗ್ರೆನೇಡ್ ಎಸೆದಿದ್ದಾರೆ. ಲಾಲ್ ಚೌಕ್ ಮಾರುಕಟ್ಟೆಯಲ್ಲಿ ಭಾನುವಾರದ ಸಂತೆಯಿದ್ದು, ಘಟನೆಯಿಂದಾಗಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ರೀತಿಯ ಗ್ರೆನೇಡ್ ದಾಳಿ ನಡೆದಿದ್ದು, 16 ವರ್ಷದ ಬಾಲಕ ಗಾಯಗೊಂಡಿದ್ದ. ಕಳೆದ ವರ್ಷ ಅಕ್ಟೋಬರ್ 26ರಿಂದ ನವೆಂಬರ್ 5ರ ಕಾಲಾವಧಿಯಲ್ಲಿ ಒಟ್ಟು ಮೂರು ಗ್ರೆನೇಡ್ ದಾಳಿ ನಡೆದಿದ್ದು, ಓರ್ವ ಮೃತಪಟ್ಟಿದ್ದು, 26 ಜನರು ಗಾಯಾಳುಗಳಾಗಿದ್ದರು. (ಏಜೆನ್ಸೀಸ್)