ನ್ಯೂಸ್

ಆಸ್ಪತ್ರೆಯ ಟ್ಯಾಂಕ್ ಸ್ವಚ್ಛಗೊಳಿಸಲು ಹೋಗಿ ನಾಲ್ವರು ಅಲ್ಲೇ ಉಸಿರುಗಟ್ಟಿ ಸಾವು!

ಹರಿಯಾಣ: ಮ್ಯಾನ್​ಹೋಲ್​ಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಕೆಲವು ಉಸಿರುಗಟ್ಟಿ ಸಾವಿಗೀಡಾಗಿದ ಪ್ರಕರಣಗಳಿವೆ. ಅದೇ ರೀತಿ ಇಲ್ಲಿ ಆಸ್ಪತ್ರೆಯ ಟ್ಯಾಂಕ್​ ಒಂದನ್ನು ಸ್ವಚ್ಛಗೊಳಿಸಲು ಹೋದ ನಾಲ್ವರು ಸಾವಿಗೀಡಾಗಿದ್ದಾರೆ.

ಹರಿಯಾಣದ ಫರಿದಾಬಾದ್​ನ ಕ್ಯೂಆರ್​ಜಿ ಎಂಬ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಸ್ವಚ್ಛತಾ ಸಿಬ್ಬಂದಿಯನ್ನು ಆಸ್ಪತ್ರೆಯ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸಲು ಅದರೊಳಕ್ಕೆ ಇಳಿಸಿದಾಗ ಈ ದುರಂತ ಸಂಭವಿಸಿದೆ.

ಸೆಪ್ಟಿಕ್ ಟ್ಯಾಂಕ್ ಒಳಕ್ಕೆ ಇಳಿದ ನಾಲ್ವರು ಅಲ್ಲಿನ ವಿಷಾನಿಲದಿಂದ ಉಸಿರುಗಟ್ಟಿ ಅಲ್ಲೇ ಸಾವಿಗೀಡಾಗಿದ್ದಾರೆ. ಕೊನೆಗೆ ಅಗ್ನಿಶಾಮಕ ವಾಹನವನ್ನು ತರಿಸಿ ಅದರ ಸಿಬ್ಬಂದಿ ಮೂಲಕ ನಾಲ್ವರ ಶವಗಳನ್ನು ಹೊರತೆಗೆಯಲಾಯಿತು. ಮೃತಪಟ್ಟವರ ಹಾಗೂ ಘಟನೆ ಕುರಿತ ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಸಾವಿಗೀಡಾದ ನಾಲ್ವರೂ 25ರಿಂದ 30 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.