ಪಟ್ಟಿಣಂತಿಟ್ಟ (ಕೇರಳ): ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಕುವೈತ್ನ ಅಬ್ಬಾಸಿಯಾದಲ್ಲಿ ಸಂಭವಿಸಿದೆ.
ಮೃತರನ್ನು ಕೇರಳದ ಮುಳಕ್ಕಲ್ ಮ್ಯಾಥ್ಯೂ ಮುಜಾಕಲ್ (40), ಅವರ ಪತ್ನಿ ಲಿನಿ ಅಬ್ರಹಾಂ (38), ಅವರ ಮಕ್ಕಳಾದ ಐರಿನ್ (14), ಮತ್ತು ಐಸಾಕ್ (9) ಎಂದು ಗುರುತಿಸಲಾಗಿದೆ.
ಮ್ಯಾಥ್ಯೂ ಮುಜಾಕಲ್ ಅವರು ಉದ್ಯೋಗಕ್ಕಾಗಿ ಕುವೈತ್ ಅಬ್ಬಾಸಿಯಾದಲ್ಲಿ ಕಳೆದ 15 ವರ್ಷಗಳಿಂದ ಕುಟುಂಬದೊಂದಿಗೆ. ಶುಕ್ರವಾರ ರಾತ್ರಿ ಅವರು ಮಲಗುವ ಕೋಣೆಯಲ್ಲಿ ಸಂಭವಿಸಿದ ಎ.ಸಿ ಯಂತ್ರದ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಢ ಸಂಭವಿಸಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತದೇಹಗಳನ್ನು ಭಾರತಕ್ಕೆ ಯಾವಾಗ ತರಲಾಗುತ್ತದೆ ಎಂಬ ಮಾಹಿತಿ ನಮಗೆ ಇನ್ನೂ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇರಳದ ಕೊಚ್ಚಿ ಬಳಿಯ ನೆಡುಂಬಸ್ಸರಿ ಮೂಲದವಾರದ ಮ್ಯಾಥ್ಯೂ ಮುಜಾಕಲ್ ತಾಯಿ ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಕಳೆದ ಗುರುವಾರವಷ್ಟೇ ಅವರು ತಮ್ಮ ಮಕ್ಕಳು ಮತ್ತು ಪತ್ನಿ ಜೊತೆ ರಜೆ ಮುಗಿಸಿಕೊಂಡು ಕುವೈತ್‌ಗೆ ತೆರಳಿದ್ದರು ಎನ್ನಲಾಗಿದೆ.