ನವದೆಹಲಿ: ಉತ್ತರ ಪ್ರದೇಶದ ಸಂಭಾಲ್ನಲ್ಲಿ ಮಸೀದಿ ಸರ್ವೇಗೆ ಸಂಬಂಧಿಸಿದ ಗಲಭೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದೇ ವಿಷಯದ ಬಗ್ಗೆ ಮಾತನಾಡಿರುವ ಸಂಸದ ಅಸಾದುದ್ದಿನ್ ಓವೈಸಿ(Asaduddin Owaisi) ಇದು ದಾಳಿಯಲ್ಲ ಕೊಲೆ ಎಂದು ಹೇಳಿದ್ದಾರೆ.
ಶಾಹಿ ಜಾಮಾ ಮಸೀದಿಯ ಕುರಿತು ಸಮೀಕ್ಷೆಗೆ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಮತ್ತು ಪ್ರತಿಭಟನೆಯಲ್ಲಿ ಪೊಲೀಸರ ನಡೆಸಿದ ಗುಂಡಿನ ದಾಳಿ ಬಗ್ಗೆ ಓವೈಸಿ ಕಳವಳ ವ್ಯಕ್ತಪಡಿಸಿದ್ದು, ಸಂತ್ರಸ್ತರು ಪ್ರತಿಭಟನೆ ಮಾಡುತ್ತಿರುವುದು ಸಂವಿಧಾನದ ಆರ್ಟಿಕಲ್ 19(1) ಅಡಿಯಲ್ಲಿ ಅವರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆ; ಮನುಷ್ಯನಾಗಿ ಸೋತಿಲ್ಲ; ಅನಿತಾ ಕುಮಾರಸ್ವಾಮಿ|Nikhil’s mother made an emotional post
ಸೋಮವಾರ ಸುದ್ದಿಗಾರರ ಜತೆ ಮಾತನಾಡಿರುವ ಅವರು, ''ಸಂಭಾಲ್ನಲ್ಲಿರುವ ಮಸೀದಿಯು 50-100 ವರ್ಷಗಳು ಹಳೆಯದ್ದು ಅಲ್ಲ. 200-250 ವರ್ಷಗಳು ಹಳೆಯದು. ಕೋರ್ಟ್ ಮಸೀದಿಯ ಉಸ್ತುವಾರಿಗಳನ್ನು ಕೇಳದೆ, ಸಮೀಕ್ಷೆಗೆ ಆದೇಶ ನೀಡಿದೆ. ಇದು ತಪ್ಪು. ಇಲ್ಲಿ ನಡೆದ ಹಿಂಸಚಾರ ಮತ್ತು ಈ ಘಟನೆಯು ನಾಲ್ವರು ಮುಸ್ಲಿಂ ಯುವಕರನ್ನು ಬಲಿ ತೆದುಕೊಂಡಿದೆ. ಇದು ಬರೀ ದಾಳಿ ಅಲ್ಲ, ಕೊಲೆ ಎಂದು ಹೇಳಿದ್ದಾರೆ.
ಸಂಭಾಲ್ನ ಜಾಮಾ ಮಸೀದಿ ಈ ಹಿಂದೆ ದೇವಸ್ಥಾನ ಆಗಿತ್ತು. ಇದರ ದೇವಸ್ಥಾನದ ದಾಖಲೆಗಳು ಕೂಡ ಇವೆ, ಹೀಗಾಗಿ, ಸರ್ವೆಗೆ ಆದೇಶ ನೀಡಬೇಕು ಎಂದು ಹಿರಿಯ ವಕೀಲ ವಿಷ್ಣು ಶಂಕರ್ ಜೈನ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಆದೇಶ ನೀಡಿದ ಹಿನ್ನೆಲೆ ಅಧಿಕಾರಿಗಳು ಸಮೀಕ್ಷೆಗೆ ಬಂದಾಗ, ಸರ್ವೇ ಮಾಡಬಾರದು ಎಂದು ಗಲಾಟೆ ಉಂಟಾದ್ದು, ಇದು ತೀವ್ರ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರಸ್ತುತ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ, (ಏಜೆನ್ಸೀಸ್).