ನ್ಯೂಸ್

ಶಾಲೆಯ ಬಳಿ ಬಾಂಬ್​ ಸ್ಫೋಟ,ಆರು ಸಾವು

mahalakshmihm

ಕಾಬೂಲ್​: ಶಾಲೆಯ ಸಮೀಪ ಸಂಭವಿಸಿದ ಸರಣಿ ಬಾಂಬ್​ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದು, 14ಕ್ಕೂ ಹೆಚ್ಚು ಮಂದಿ ಗಾಯೊಂಡಿರುವ ಘಟನೆ ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ನಡೆದಿದೆ.

ಶಿಯಾ ಸಮುದಾಯದವರನ್ನು ಗುರಿಯಾಗಿರಿಸಿ ಐಎಸ್​ ಉಗ್ರರಿಂದ ದಾಳಿ ನಡೆದಿರಬಹುದು ಎಂದು ಕಾಬೂಲ್​ ಪೊಲೀಸ್ ವಕ್ತಾರ ಖಾಲಿದ್​ ಜದ್ರಾನ್​ ತಿಳಿಸಿದ್ದಾರೆ.

ಅಬ್ದುಲ್​ ರಹಿಮ್​ ಹೈ ಸ್ಕೂಲ್​​ ಅಕ್ಕಪಕ್ಕ ಶಿಯಾ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವುದರಿಂದ ಈ ಪ್ರದೇಶವನ್ನೇ ಗುರಿಯಾಗಿಸಿ ಬಾಂಬ್​ ಸ್ಫೋಟಿಸಿದ್ದಾರೆ ಎಂದು ಖಾಲಿದ್​ ಮಾಹಿತಿ ನೀಡಿದ್ದಾರೆ.