ನ್ಯೂಸ್

'ಟಾಕ್ಸಿಕ್' ಸಿನಿಮಾದಲ್ಲಿ ಬರೋಬ್ಬರಿ 4 ಮಂದಿ ನಟಿಯರದ್ದೇ ದರ್ಬಾರ್​! ಯಶ್​ ಜತೆ ರೊಮ್ಯಾನ್ಸ್​ ಮಾಡುವ ಸುಂದ್ರಿ ಯಾರು?

ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಗಿಟ್ಟಿಸಿಕೊಂಡ ಯಶ್ ತಮ್ಮ ಮುಂದಿನ ಸಿನಿಮಾ ಯಶ್ ಟ್ಯಾಕ್ಸಿಕ್ ಮೂಲಕ ಬರಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಯಶ್​ಗೆ ಜೋಡಿಯಾಗಿ ಸಿನಿಮಾ ಇಂಡಸ್ಟ್ರಿಯ ಟಾಪ್​ ಹಿರೋಯಿನ್​ಗಳೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಯಶ್​ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಯಾಗಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯದಿಂದ ಇಂಪ್ರೆಸ್ ಆಗುತ್ತಿರುವ ತಾರಾ ಸುತಾರಿಯಾ ಟಾಕ್ಸಿಕ್ ಚಿತ್ರಕ್ಕೆ ಯಶ್ ಆಯ್ಕೆಯಾಗಿರುವುದು ಗೊತ್ತೇ ಇದೆ.

ಕಿಯಾರಾ ಮತ್ತು ತಾರಾ ಸುತಾರಿಯಾ ಟಾಕ್ಸಿಕ್‌ನ ಭಾಗವಾಗಿದೆ. ಚಿತ್ರದಲ್ಲಿ ಹುಮಾ ಖುರೇಷಿ ಕೂಡ ಇದ್ದಾರೆ ಎಂಬ ವರದಿಗಳು ಈಗಾಗಲೇ ಬಂದಿವೆ. ಇವರ ಪೈಕಿ ಯಾರ ಜತೆ ಯಶ್‌ ರೊಮ್ಯಾನ್ಸ್‌ ಮಾಡಲಿದ್ದಾರೆ? ಎಂಬುದು ಸದ್ಯದ ಪ್ರಶ್ನೆ. ಹುಮಾ ಖುರೇಷಿ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. 1950-70ರ ಅವಧಿಯ ಡ್ರಗ್ಸ್ ಮಾಫಿಯಾ ಕಥೆಯೊಂದಿಗೆ ಯಶ್ ಟಾಕ್ಸಿಕ್ ಸಿನಿಮಾ ಬರುತ್ತಿದೆ. ಈ ಚಿತ್ರದ ಮೂಲಕ ಯಶ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ನೋಡುತ್ತಿದ್ದಾರೆ. ನಯನತಾರಾ ಯಶ್ ಸಹೋದರಿಯಾಗಿ ಆಶ್ಚರ್ಯಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾತ್ರವು ನಯನತಾರಾ ಅವರ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

ಕೆಜಿಎಫ್‌ನ ಬಂಪರ್ ಹಿಟ್ ನಂತರ, ಯಶ್ ಆ ಚಿತ್ರದ ನಂತರ ತಮ್ಮ ಮುಂದಿನ ಯೋಜನೆಯನ್ನು ಮಾಡಲು ವರ್ಷಗಳ ಕಾಲ ಕಾಯುತ್ತಿದ್ದರು. ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಈಗಾಗಲೇ ಎರಡು ಅದ್ಧೂರಿ ಶೆಡ್ಯೂಲ್ ಗಳನ್ನು ಮುಗಿಸಿರುವ ಈ ಚಿತ್ರವು ಪ್ಲಾನ್ ಮಾಡಿದಂತೆ ಶೂಟಿಂಗ್ ಮುಗಿಸಿ 2025ರ ಬೇಸಿಗೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಯಶ್ ಟಾಕ್ಸಿಕ್ ಮೇಲೆ ಪ್ರೇಕ್ಷಕರ ನಿರೀಕ್ಷೆಯೂ ಒಂದು ರೇಂಜ್ ನಲ್ಲಿದೆ. ಕೆಜಿಎಫ್ ದಾಖಲೆಗಳನ್ನು ಹಿಂದಿಕ್ಕುವ ಮಾಸ್ ಆಕ್ಷನ್ ಸಿನಿಮಾವಾಗಿ ಈ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರದ ಪ್ರತಿ ಅಪ್ಡೇಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತದೆ.