ನ್ಯೂಸ್

ಗೆಸ್ಟ್​ಹೌಸ್​ನಲ್ಲಿ ಒಂದೇ ಕುಟುಂಬದ 4 ಜನರ ಶವ ಪತ್ತೆ...Four Bodies Found At Guest House

ರಾಜಸ್ಥಾನ: ( Four Bodies Found At Guest House ) ಗೆಸ್ಟ್​ಹೌಸ್​​ವೊಂದರಲ್ಲಿ ತಂಗಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ರಾಜಸ್ಥಾನದ ಮೆಹಂದಿಪುರದ ಬಾಲಾಜಿ ಪಟ್ಟಣದ ಧರ್ಮಶಾಲಾ ಅತಿಥಿಗೃಹದಲ್ಲಿ ನಡೆದಿದೆ.

ಮೃತರಲ್ಲಿ ಪೋಷಕರು, ಮಗ ಮತ್ತು ಮಗಳು ಸೇರಿದ್ದಾರೆ, ಅವರೆಲ್ಲರೂ ಉತ್ತರಾಖಂಡದ ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದವರು ಎಂದು ತಿಳಿದು ಬಂದಿದೆ.

ನಡೆದಿದ್ದೇನು?: ಜನವರಿ 12ರಂದು ಸಮಾಧಿ ವಾಲಿ ಗಲಿಯ ರಾಧಾ-ಕೃಷ್ಣ ಆಶ್ರಮ ಧರ್ಮಶಾಲಾದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು ಮತ್ತು ಜನವರಿ 14 ರಂದು ಮಧ್ಯಾಹ್ನ ಚೆಕ್ ಔಟ್ ಮಾಡಲು ನಿರ್ಧರಿಸಿದ್ದರು.

ಸಿಬ್ಬಂದಿ ಮ್ಯಾನೇಜರ್‌ ಪರಿಶೀಲಿಸಲು ಹೋದಾಗ ಕೊಠಡಿಯೊಳಗೆ ಹೋದ ವೇಳೆ ನಾಲ್ಕು ಮೃತದೇಹಗಳು ಬಿದ್ದಿರುವುದು ಕಂಡಿತ್ತು. ಮಾಹಿತಿ ಪಡೆದ ಬಾಲಾಜಿ ಪೊಲೀಸರು ಹಾಗೂ ತೋಡಭೀಮ್ ಠಾಣೆ ಪ್ರಭಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ಇಬ್ಬರ ಶವ ನೆಲದ ಮೇಲೆ ಮಲಗಿರುವ ರೀತಿ ಇತ್ತು, ಇನ್ನಿಬ್ಬರ ಶವ ಹಾಸಿಗೆಯ ಮೇಲೆ ಪತ್ತೆಯಾಗಿವೆ. ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದಿದ್ದಾರೆ.