ಬಿಹಾರ: ಕಾರಿನಲ್ಲಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಪೊಲೀಸರು, ದಾರಿ ಮಧ್ಯೆ ನಾಲ್ವರನ್ನು ಕೆಳಗಿಳಿಸಿ ವಾಹನವನ್ನು ತಳ್ಳಿಸಿದ ಘಟನೆ ಬಿಹಾರದ ಭಾಗಲ್ಪುರದಲ್ಲಿ ವರದಿಯಾಗಿದೆ.
ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದ ಪೊಲೀಸರು, ದಾರಿ ಮಧ್ಯೆ ಇಂಧನ ಖಾಲಿಯಾದ ಕಾರಣ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ತಕ್ಷಣ ವಾಹನದೊಳಗೆ ಕುಳಿತ್ತಿದ್ದ ಅಪರಾಧಿಗಳಿಗೆ ಕಾರನ್ನು ಹಿಂಬದಿಯಿಂದ ತಳ್ಳಲು ಹೇಳಿದ ಅಧಿಕಾರಿಗಳು, 500 ಮೀಟರ್ ದೂರ ಅವರಿಂದ ಕಾರನ್ನು ನೂಕಿಸಿದ್ದಾರೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಪ್ರಮೋದಿತ್ ನಾರಾಯಣ್ ಸಿಂಗ್, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ,(ಏಜೆನ್ಸೀಸ್).
https://www.vijayavani.net/sweeped-streets-in-the-day-cracked-ras-exam-become-deputy-collector-today