ಕಂಪ್ಲಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಎಮ್ಮಿಗನೂರಿನ ವ್ಯಾಪಾರಿ ಹಂಚಿನಾಳ ಪೀರಾಸಾಬ್ ಮಾತನಾಡಿದರು. ಪ್ರಮುಖರಾದ ಜಿ.ಪ್ರಕಾಶ, ಚಂದ್ರಯ್ಯ ಸೊಪ್ಪಿಮಠ, ಎಸ್.ರಾಮು ಇದ್ದರು. 
ನ್ಯೂಸ್

ಶರಣ ಸಾಹಿತ್ಯದ ತಿರುಳು ತಿಳಿಯಿರಿ

ಕಂಪ್ಲಿ : ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕಡಿಮೆ ಯಾಗುತ್ತಿವೆ. ಇದರಿಂದ ಭವಿಷ್ಯದಲ್ಲಿ ಭ್ರಷ್ಟತೆ, ಅಶಾಂತಿ, ಭಯೋತ್ಪಾದನೆ ಪಿಡುಗುಗಳು ಹೆಚ್ಚುತ್ತವೆ. ಇದನ್ನು ತೊಲಗಿಸಲು ಶರಣ ಸಾಹಿತ್ಯದ ತಿರುಳನ್ನು ಅರಿತು ಜೀವನದಲ್ಲಿ ಪಾಲಿಸಬೇಕಿದೆ ಎಂದು ಇಟಗಿಯ ಸರ್ಕಾರಿ ಹಿಪ್ರಾ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಹೇಳಿದರು.

ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಬಳ್ಳಾರಿಯ ಅಚ್ಚಪ್ಪ ಸೋಮಪ್ಪ ಹಂಪಮ್ಮ ದತ್ತಿ, ಪ್ರೊ.ಕೆ.ಬಿ.ಹನುಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆ ದಿನವನ್ನು ಸರ್ಕಾರವೇ ಆಚರಿಸಬೇಕಿದೆ. ಸುತ್ತೂರು ಶ್ರೀಗಳು ಅಕ್ಷರ, ದಾಸೋಹ, ಶರಣ ತತ್ವದಲ್ಲಿ ತೊಡಗಿಸಿಕೊಂಡು ಆದರ್ಶರಾಗಿದ್ದಾರೆ ಎಂದರು. ಎಮ್ಮಿಗನೂರಿನ ವ್ಯಾಪಾರಿ ಹಂಚಿನಾಳ ಪೀರಾಸಾಬ್ ಮಾತನಾಡಿ, ಶರಣ, ಸಂತರು, ತತ್ವಪದಕಾರರು, ದಾಸರು ಕಾಲಕಾಲಕ್ಕೆ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆ. ಅವರ ತತ್ವ ಆದರ್ಶಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದರು.

ಶಿಕ್ಷಕ ಎಸ್.ರಾಮು, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಅಶೋಕ ಕುಕನೂರ, ಕವಿತಾಳ ಬಸವರಾಜ, ಕೆ.ಚಂದ್ರಶೇಖರ, ಸಜ್ಜೇದ ವೀರಭದ್ರಪ್ಪ, ಎಸ್.ಶಾಮಸುಂದರರಾವ್, ಡಾ.ಬಿ.ಸುನೀಲ್. ಗುರುಬಸಮ್ಮ ಸೊಪ್ಪಿಮಠ, ಕೆ.ಯಂಕಾರೆಡ್ಡಿ, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.