ನ್ಯೂಸ್

ಸಮರದ ನಡುವೆ ಸಂಧಾನ ಸೂತ್ರ; ಬೆಲಾರಸ್​ನಲ್ಲಿ ರಷ್ಯಾ-ಯೂಕ್ರೇನ್ ಮಾತುಕತೆಗೆ ವೇದಿಕೆ ಸಜ್ಜು

ಕಿಯೆವ್/ಮಾಸ್ಕೋ: ರಷ್ಯಾ-ಯೂಕ್ರೇನ್ ನಡುವಿನ ಕದನ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ಯೂಕ್ರೇನ್ ಮೇಲೆ ಮುಗಿಬಿದ್ದಿರುವ ರಷ್ಯಾ ಕೊಂಚ ಮೇಲುಗೈ ಸಾಧಿಸಿದ್ದರೂ ನ್ಯಾಟೋ ಪಡೆಗಳ ಬೆಂಬಲ, ಮಿತ್ರರಾಷ್ಟ್ರಗಳಿಂದ ಕ್ಷಿಪಣಿಗಳನ್ನು ಪಡೆದು ಶಕ್ತಿ ವೃದ್ಧಿಸಿಕೊಂಡಿರುವ ಯೂಕ್ರೇನ್ ಕೂಡ ತಿರುಗಿಬಿದ್ದಿದೆ.

ರಷ್ಯಾ ಸೇನೆ ಕೈವಶ ಮಾಡಿಕೊಂಡಿದ್ದ ರ್ಖಾವ್ ಪಟ್ಟಣವನ್ನು ಯೂಕ್ರೇನ್ ಮರುವಶಕ್ಕೆ ಪಡೆದಿದ್ದು, ರಷ್ಯಾ ಯೋಧರನ್ನೇ ಸೆರೆ ಹಿಡಿದಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ರಷ್ಯಾ ಮುಂದಿಟ್ಟಿರುವ ಶಾಂತಿ ಮಾತುಕತೆ ಪ್ರಸ್ತಾಪಕ್ಕೆ ಯೂಕ್ರೇನ್ ಸಹಮತ ವ್ಯಕ್ತಪಡಿಸಿದ್ದು, ಆ ದೇಶದ ನಿಯೋಗ ಬೆಲಾರಸ್ ಗಡಿಯತ್ತ ತೆರಳಿದೆ. ಉಭಯ ದೇಶಗಳ ಮಾತುಕತೆ ಫಲಪ್ರದವಾದಲ್ಲಿ ಕದನಕ್ಕೆ ವಿರಾಮ ಬೀಳಲಿದೆ.

ಏನೇನಾಯ್ತು?
  •  ಯೂಕ್ರೇನ್​ನ ರ್ಖಾವ್​ನಲ್ಲಿ ತೈಲ ಟ್ಯಾಂಕರ್, ಗ್ಯಾಸ್ ಪೈಪ್​ಲೈನ್ ಸ್ಫೋಟ
  •  ಮನೆಗಳು ಕುಸಿತ, ಸುರಂಗ ರೈಲು ಮಾರ್ಗಕ್ಕೆ ಹಾನಿ, ಉಸಿರಾಟಕ್ಕೆ ತೊಂದರೆ
  •  ಸೇನಾ ಸಾಮರ್ಥ್ಯದಲ್ಲಿ ಶೇ.50 ಭಾಗವನ್ನು ಯೂಕ್ರೇನ್ ಮೇಲೆ ಬಳಸಿದ ರಷ್ಯಾ
  •  ಯೂಕ್ರೇನ್​ನಲ್ಲಿ ಶಸ್ತ್ರ ಹಿಡಿದ ನಾಗರಿಕರು, ಊರು, ಊರುಗಳಲ್ಲಿ ಗಸ್ತು
  •  ಯೂಕ್ರೇನ್​ನಿಂದ 2 ಲಕ್ಷ ಜನರು ವಲಸೆ, 240 ನಾಗರಿಕರ ಸಾವು
  •  ರಷ್ಯಾ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಕೈಗೊಂಡ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಪೋಲಂಡ್​ಗೆ ತೆರಳುವುದಕ್ಕೆ ಯೂಕ್ರೇನ್ ಗಡಿ ಸಿಬ್ಬಂದಿ ತಡೆ
  •  ವೀಸಾ ನಿರ್ಬಂಧಗಳಿಲ್ಲದೆಯೇ ಭಾರತೀಯರಿಗೆ ದೇಶ ಪ್ರವೇಶಿಸಲು ಪೋಲಂಡ್ ಸಮ್ಮತಿ