ನ್ಯೂಸ್

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ದೇವಿಸಿಂಗ್ ಆರ್. ಶೇಖಾವತ್ ನಿಧನ

ನವದೆಹಲಿ: ದೇಶದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಮಾಜಿ ಶಾಸಕ ದೇವಿಸಿಂಗ್ ರಾಂಸಿಂಗ್ ಶೇಖಾವತ್ ಪುಣೆಯಲ್ಲಿ ನಿಧನರಾಗಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂತಾದ ಹಿರಿಯ ರಾಜಕೀಯ ನಾಯಕರು ಕಾಂಗ್ರೆಸ್ ನಾಯಕನ ನಿಧನಕ್ಕೆ ಟ್ವಟಿರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರು ಪತ್ನಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪುತ್ರ ರಾಜೇಂದ್ರ ಸಿಂಗ್ ಶೇಖಾವತ್ ಮತ್ತು ಪುತ್ರಿ ಜ್ಯೋತಿ ರಾಥೋಡ್ ಅವರನ್ನು ಅಗಲಿದ್ದಾರೆ. ಕಳೆದ ಫೆ.12ರಂದು ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ ರಕ್ತದೊತ್ತಡ, ಮೂತ್ರಪಿಂಡದ ವೈಫಲ್ಯದಿಂದಾಗಿ ಇದೀಗ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: VIDEO | ನೀವೇ ಸಿಎಂ ಎಂದು ಗೊತ್ತಾಗಿಲ್ಲ! ಬೆಳ್ಳಂಬೆಳಗ್ಗೆ ಚಹಾ ಅಂಗಡಿಯವನಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ

ಕೃಷಿಕ, ಶಿಕ್ಷಣತಜ್ಞ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಶೇಖಾವತ್ ಅವರು ಅಮರಾವತಿಯಲ್ಲಿ ಮೊದಲ ಬಾರಿಗೆ ಮೊದಲ ಮೇಯರ್ ಆಗಿ (1991-1992), ಬಳಿಕ ಮಹಾರಾಷ್ಟ್ರದ ಶಾಸಕರಾಗಿ (1985-1990) ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. (ಏಜೆನ್ಸೀಸ್)