ನ್ಯೂಯಾರ್ಕ್: ಕೆನಡಾದ ಮಾಜಿ ಪ್ರಧಾನಿ(PM) ಜಸ್ಟಿನ್ ಟ್ರುಡೊ ಅವರು ಪಾಪ್ ತಾರೆ ಕೇಟಿ ಪೆರ್ರಿ ಅವರೊಂದಿಗೆ ಶರ್ಟ್ ಇಲ್ಲದೇ ಶರ್ಟ್‌ಗಳಿಲ್ಲದೆ ಚುಂಬಿಸುತ್ತಿರುವ ಕ್ಲೋಸ್-ಅಪ್ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಕಳೆದ ಕೆಲ ತಿಂಗಳಿಂದೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಉಳಿದಿದ್ದರು. ಅಂದಿನಿಂದ ತಾರೆ ಪೆರ್ರಿಯೊಂದಿಗೆ ಪ್ರಯಣದಲ್ಲಿದ್ದರು ಎಂದು ವರದಿಗಳು ಉಲ್ಲೇಖಿಸಿವೆ. ಇದೀಗ ಇದನೆಲ್ಲಾ ಗಮನಿಸಿದರೆ ಕೆನಡಾಕ್ಕಿಂತ ಅಮೆರಿಕಾದಲ್ಲೇ ವಾಸವಾಗಿದ್ದಾರೆ ಎಂದು ನೆಟ್ಟಿಗರು ಕ್ಲಾಸ್ ತಗೆದುಕೊಂಡಿದ್ದಾರೆ.
ಇನ್ನು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ ತಡ ಟ್ರೂಡೊ ಅವರನ್ನು ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಒಬ್ಬ ಬಳಕೆದಾರರು, "ಟ್ರೂಡೊ ಯಾವ ರೀತಿಯ ವ್ಯಕ್ತಿ? ಅವರು ತಮ್ಮ ಹೆಂಡತಿ ಮತ್ತು ಮಕ್ಕಳ ಬಗ್ಗೆಯೂ ಪ್ರಾಮಾಣಿವಾಗಿಲ್ಲ. ಅವರು ಬಿಟ್ಟು ಹೋದ ದೇಶವನ್ನು ನೀವು ಬಿಟ್ಟು ಹೋಗಿ. ನಾಚಿಕೆಯಿಲ್ಲದ ವ್ಯಕ್ತಿ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ ''ಜಸ್ಟಿನ್ ಇಷ್ಟು ದಿನ ಮಾಡಬೇಕಾಗಿದ್ದದ್ದು ಇದನ್ನೇ. ಕೆನಡಾವನ್ನು ಉಳಿಸಬಹುದಿತ್ತು" ಎಂದು ವ್ಯಂಗ್ಯವಾಡಿದ್ದಾರೆ. "ಜಸ್ಟಿನ್ ಟ್ರುಡೊ ಮತ್ತು ಕೇಟಿ ಪೆರ್ರಿ. ಒಬ್ಬರು ಗಗನಯಾತ್ರಿಯಂತೆ ನಟಿಸಿದರು. ಒಬ್ಬರು ಪ್ರಧಾನ ಮಂತ್ರಿಯಂತೆ ನಟಿಸಿದರು" ಎಂದು ಟೀಕಿಸಿದ್ದಾರೆ.
ಟ್ರೂಡೊ 2023ರಲ್ಲಿ ಪತ್ನಿ ಸೋಫಿಯಿಂದ ವಿಚ್ಛೇದನ ಪಡೆಯುವ ಮೂಲಕ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದರು. ಆದಾಗ್ಯೂ, ಈ ದಂಪತಿಗೆ 18 ವರ್ಷದ ಕ್ಸೇವಿಯರ್ ಮತ್ತು 11 ವರ್ಷದ ಹ್ಯಾಡ್ರಿಯನ್ ಎಂಬ ಇಬ್ಬರು ಗಂಡು ಮಕ್ಕಳು ಮತ್ತು 16 ವರ್ಷದ ಎಲ್ಲಾ-ಗ್ರೇಸ್ ಎಂಬ ಮಗಳು ಇದ್ದಾರೆ.
40 ವರ್ಷದ ಕೇಟಿ ಪೆರ್ರಿಗೆ ಪೈರೇಟ್ಸ್ ಆಫ್ ದಿ ಕೆರಿಬಿಯನ್ ತಾರೆ ಒರ್ಲ್ಯಾಂಡೊ ಬ್ಲೂಮ್ ಅವರೊಂದಿಗೆ ಐದು ವರ್ಷದ ಮಗಳು ಡೈಸಿ ಡವ್ ಬ್ಲೂಮ್ ಇದ್ದಾರೆ ಮತ್ತು ಈ ಹಿಂದೆ ಹಾಸ್ಯನಟ ರಸೆಲ್ ಬ್ರಾಂಡ್ ಅವರನ್ನು ವಿವಾಹವಾಗಿದ್ದರು.(ಏಜೆನ್ಸೀಸ್)