ಕೋಲ್ಕತ್ತಾ: ಅಂದುಕೊಂಡಂತೆಯೇ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ತಮಗಿಂತ ಅರ್ಧವಯಸ್ಸಿನ ಮಹಿಳೆಯನ್ನು ವಿವಾಹವಾಗಿದ್ದಾರೆ.
ಇತ್ತೀಚೆಗೆ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೇ ಮೊದಲ ವಾರದಲ್ಲಿ ಮದುವೆಯಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ತಮ್ಮ ಮೊದಲ ಪತ್ನಿ ಅನುಮತಿಯಿಂದಲೇ ಎರಡನೇ ಮದುವೆಯಾಗುತ್ತಿರುವುದಾಗಿಯೂ ಘೋಷಿಸಿಕೊಂಡಿದ್ದರು.
66 ವರ್ಷದ ಅರುಣ್ ಲಾಲ್ ತಮಗಿಂತ 28 ವರ್ಷ ಚಿಕ್ಕವಳಾದ ಬುಲ್ ಬುಲ್ ಸಾಹಾ ಅವರನ್ನು ಈ ವಯಸ್ಸಿನಲ್ಲೂ ಪ್ರೀತಿಸಿ ವಿವಾಹವಾಗಿದ್ದಾರೆ. ಸದ್ಯ ಇವರಿಬ್ಬರ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಕೋಲ್ಕತ್ತಾದ ಖಾಸಗಿ ಹೋಟೆಲ್ವೊಂದರಲ್ಲಿ ಇಬ್ಬರು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.