ನ್ಯೂಸ್

ಮನೆಯಲ್ಲೇ ಧ್ವಜಾರೋಹಣ ಮಾಡಿದ ಮಾಜಿ ಸಿಎಂ ಬಿಎಸ್​ವೈ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಪದವಿಯಿಂದ ಈಗಷ್ಟೇ ವಿಶ್ರಾಂತಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಇಂದು ತಮ್ಮ ಮನೆಯ ಆವರಣದಲ್ಲೇ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರು. ಈ ಚಿತ್ರವನ್ನು ಬಿಎಸ್​ವೈ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಅವರಿಗೆ ಟ್ವಿಟರ್​ನಲ್ಲಿ ಒಂದು ಮಿಲಿಯನ್​ ಫಾಲೋವರ್ಸ್​​ ಇದ್ದಾರೆ.

"ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ, ನಮಗೆ ಯಾವುದೇ ಸವಾಲನ್ನು ಎದುರಿಸಲು ಪ್ರೇರಣೆ ನೀಡುವ ಜೊತೆಗೆ ಭವ್ಯ ರಾಷ್ಟ್ರನಿರ್ಮಾಣದ ಕರ್ತವ್ಯಗಳನ್ನೂ ನೆನಪಿಸುತ್ತದೆ. ಬನ್ನಿ, ನಾವೆಲ್ಲರೂ ಒಂದಾಗಿ ಸಮೃದ್ಧ, ಸಶಕ್ತ, ಶ್ರೇಷ್ಠ ಭಾರತಕ್ಕಾಗಿ ಒಂದಾಗಿ ಮುನ್ನಡೆಯೋಣ. ಜೈ ಹಿಂದ್!" ಎಂದು ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ.