ನವದೆಹಲಿ: ಭಾರತ ಸರ್ಕಾರ ನಿಷೇಧಿಸಿರುವ 59 ಚೀನಾದ ಆ್ಯಪ್ಗಳ ಪರವಾಗಿ ನ್ಯಾಯಾಲದಲ್ಲಿ ಯಾವ ಕಾರಣಕ್ಕೂ ವಾದಿಸುವುದಿಲ್ಲ ಎಂದು ಮಾಜಿ ಅಟಾರ್ನಿ ಜನರಲ್, ಸುಪ್ರೀಂಕೋರ್ಟ್ ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ.
ಟಿಕ್ಟಾಕ್ ಸೇರಿ 59 ಆ್ಯಪ್ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವುದಿಲ್ಲ. ಚೀನಾದ ಕಂಪನಿಗಳನ್ನು ಪ್ರತಿನಿಧಿಸಿ ವಾದ ಮಂಡನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭವಿಷ್ಯದಲ್ಲಿ ಯಾರೇ ಕೇಂದ್ರದ ಆದೇಶದ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿ, ವಾದ ಮಂಡಿಸಲು ಮನವಿ ಮಾಡಿದರೂ ಸರಿ ಅದಕ್ಕೆ ನಾವು ಒಪ್ಪುವುದಿಲ್ಲ. ನಮಗೆ ಆ್ಯಪ್ಗಳ ಬಳಕೆದಾರರ ಖಾಸಗಿ ಮಾಹಿತಿಗಳ ಸುರಕ್ಷತೆ, ಸಮಗ್ರತೆ ತುಂಬ ಮುಖ್ಯ ಎಂದಿದ್ದಾರೆ.
ಪೂರ್ವ ಲಡಾಖ್ನಲ್ಲಿ ಗಡಿ ಸಂಘರ್ಷ ಏರ್ಪಟ್ಟು, ಭಾರತದ 20 ಯೋಧರು ಮೃತರಾದ ಬೆನ್ನಲ್ಲೇ, ಭಾರತ ಚೀನಾ ವಿರುದ್ಧ ಆರ್ಥಿಕ ಯುದ್ಧ ಸಾರಲು ಮುಂದಾಗುತ್ತಿದೆ. ಕೇಂದ್ರ ಸರ್ಕಾರ ಚೀನಾದ ಪ್ರಸಿದ್ಧ ಟಿಕ್ಟಾಕ್ ಸೇರಿ 59 ಆ್ಯಪ್ಗಳನ್ನು ನಿಷೇಧ ಮಾಡಿದೆ. (ಏಜೆನ್ಸೀಸ್)