ಚೆನ್ನೈ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಸುಂದರರಾಜನ್ ಪದ್ಮನಾಭನ್ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ
ಪದ್ಮನಾಭನ್ (83) ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಪದ್ಮನಾಭನ್ 2000 ರಿಂದ 2002 ರವರೆಗೆ ಎರಡು ವರ್ಷಗಳ ಕಾಲ ಭಾರತೀಯ ಸೇನೆಯ 20 ನೇ ಮುಖ್ಯ ಜನರಲ್ ಆಗಿ ಸೇವೆ ಸಲ್ಲಿಸಿದರು. 31 ಡಿಸೆಂಬರ್ 2002 ರಂದು ಸುಂದರ ರಾಜನ್ ಸೇನಾ ಮುಖ್ಯಸ್ಥರಾಗಿ ನಿವೃತ್ತರಾದರು.
ಅವರು ಡಿಸೆಂಬರ್ 5, 1940 ರಂದು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಜನಿಸಿದರು. ಅವರು ಡಿಸೆಂಬರ್ 13, 1959 ರಂದು ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಯಿಂದ ಪದವಿ ಪಡೆದರು. ತಮ್ಮ ವೃತ್ತಿ ಜೀವನದಲ್ಲಿ ಹಲವು ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು, ಪದ್ಮನಾಭನ್ ಅವರು ದಕ್ಷಿಣ ಕಮಾಂಡ್‌ನಲ್ಲಿ ಜನರಲ್ ಕಮಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 1960 ರಿಂದ 2002. ಅವರು ಸುಮಾರು 43 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದರು.
ಪದ್ಮನಾಭನ್ ಅವರನ್ನು ಮಿಲಿಟರಿ ಇಂಟೆಲಿಜೆನ್ಸ್ (ಡಿಜಿಎಂಐ) ಮಹಾನಿರ್ದೇಶಕರಾಗಿ ನೇಮಿಸಲಾಯಿತು. ಸೇನೆಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಅವರು ಉತ್ತರ ಕಮಾಂಡ್ ಮತ್ತು ದಕ್ಷಿಣ ಕಮಾಂಡ್‌ನ GOC ಆಗಿ ಸೇವೆ ಸಲ್ಲಿಸಿದರು. ಪದ್ಮನಾಭನ್ ಅವರು 2002 ರಲ್ಲಿ ನಿವೃತ್ತರಾದ ನಂತರ ಚೆನ್ನೈನಲ್ಲಿ ನೆಲೆಸಿದರು.