ಸಮೃದ್ಧಿ ಮಂಜುನಾಥ್​  
ನ್ಯೂಸ್

ಜೋಡಿ ಗ್ರಾಮ ಸರ್ವೇಗೆ ವಿಶೇಷ ತಂಡ ರಚಿಸಿ

ಕೋಲಾರ: ಮುಳಬಾಗಿಲು ತಾಲೂಕಿನಲ್ಲಿ ಸರ್ವೇ ಆಗದೆ 46 ಜೋಡಿ ಇನಾಂ ಗ್ರಾಮಗಳಿದ್ದವು, 1950ನೇ ದಶಕದಲ್ಲಿ ಒರಿಜಿನಲ್ ಸರ್ವೇ ಆಗಿದ್ದು, ಸರ್ವೇ ಪ್ರಕಾರ 43 ಗ್ರಾಮಗಳಲ್ಲಿ ಈಗಾಗಲೇ ಆರ್‌ಟಿಸಿ ಇಂಡೀಕರಣ ಆಗಿದ್ದು, 3 ಗ್ರಾಮಗಳು ಬಾಕಿ ಉಳಿದುಕೊಂಡಿವೆ ಎಂದು ಕಂದಾಯ ಸಚಿವ ಕೃಷ್ಣಬೈರೆಗೌಡ ತಿಳಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ತಾಲೂಕು ವ್ಯಾಪ್ತಿಯಲ್ಲಿನ 22 ಜೋಡಿ ಗ್ರಾಮಗಳಲ್ಲಿನ ಖಾತೆಗಳ ಇಂಡೀಕರಣಕ್ಕೆ ವಿಶೇಷ ತಂಡ ರಚನೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾಗಮಂಗಲ, ದೇವರಾಯಸಮುದ್ರ, ಹೊಸಗಾನಹಳ್ಳಿ ಈ ಪೈಕಿ ದೇವರಾಯಸಮುದ್ರ ಸರ್ವೇ ಮಾಡಲಾಗಿದೆ. ಆದರೆ ದಾಖಲೆಯಲ್ಲಿರುವ ವಿಸ್ತೀðಣಕ್ಕೂ, ಅಳತೆ ಮಾಡಿದ ಜಾಗಕ್ಕೂ ತಾಳೆಯಾಗುತ್ತಿಲ್ಲ. ಇದಕ್ಕೆ ರೈತರು ಸಹಕಾರ ನೀಡಿದರೆ ಹೆಚ್ಚು ಕಡಿಮೆ ದಾಖಲೆ ಸೃಷ್ಟಿಸಿ ತಹಸೀಲ್ದಾರ್ ಹಂತದಲ್ಲೇ ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.
ಒಂದು ವೇಳೆ ರೈತರು ಒಪ್ಪಿಕೊಳ್ಳದಿದ್ದರೆ ಎಸಿ ಕೋರ್ಟ್‌ನಲ್ಲಿ ಹಾಕಿಕೊಂಡು ಇತ್ಯರ್ಥ ಮಾಡಬೇಕು, ಇದಕ್ಕೆ 4-5 ತಿಂಗಳು ಸಮಯ ಹಿಡಿಯುತ್ತದೆ. ಒಂದು ತಿಂಗಳಲ್ಲಿ ಸರ್ವೇ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ವಿಶೇಷ ತಂಡ ರಚನೆ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಹಳೇ ಸರ್ವೇ ನಂಬರ್ ಹಾಗೂ ಹೊಸ ಸರ್ವೇ ನಂಬರ್ ಮಧ್ಯೆ ಕೊರಲೇಷನ್ ರಿಜಿಸ್ರ್ಟೇಷನ್ ಇಲ್ಲದೆ ಹೋಗಿರುವ ಕಾರಣ ೩ ಗ್ರಾಮಗಳು ಬಾಕಿ ಉಳಿದಿವೆ, ಮೂರು ಗ್ರಾಮಗಳ ರಿಜಿಸ್ಟರ್ ಅನ್ನು ಉದ್ದೇಶ ಪೂರ್ವಕವಾಗಿಯೋ, ನಿರ್ಲಕ್ಷದಿಂದಲೋ ಕಳೆದು ಹಾಕಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮಜರುಗಿಸಲಾಗುವುದು ಎಂದು ತಿಳಿಸಿದರು.
ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಕಂದಾಯ 348 ಗ್ರಾಮಗಳಿದ್ದು, 22 ಜೋಡಿ ಗ್ರಾಮಗಳಿವೆ, ಈ ಭಾಗದ ರೈತರು ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಕಂದಾಯ ಸಚಿವರು ವಿಶೇಷ ಗಮನ ಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕು. 1946ರಲ್ಲಿ ಸರ್ವೇ ಆಗಿದ್ದು, ಹಳೆ ಸರ್ವೇಗೂ, ಹೊಸ ಸರ್ವೇಗೂ ತಾಳೆಯಾಗುತ್ತಿಲ್ಲ, ದೇವರಾಯಸಮುದ್ರ, ನಾಗಮಂಗಲ, ಹೊಸಗಾನಹಳ್ಳಿ ಹಾಗೆ ಉಳಿದುಕೊಂಡಿವೆ. ರಾಜ್ಯದಲ್ಲಿನ 224 ಕ್ಷೇತ್ರಗಳ ಪೈಕಿ ನನ್ನ ಕ್ಷೇತ್ರದ ದೇವರಾಯಸಮುದ್ರದ ಪಂಚಾಯಿತಿಯು ರಿಯಲ್ ಎಸ್ಟೇಟ್ ದಂಧೆಯ ಕೇಂದ್ರವಾಗಿದೆ. ನಿಮ್ಮ ಅಽಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಆದರೆ ರಿಯಲ್ ಎಸ್ಟೇಟ್‌ಗಳಿಗೆ ಏನು ಬೇಕಾದರೂ ಅನುಕೂಲ ಮಾಡಿಕೊಡುತ್ತಾರೆ ಎಂದು ಆರೋಪ ಮಾಡಿದರು. ಕ್ಷೇತ್ರದಲ್ಲಿ ಬಹಳಷ್ಟು ಮಂದಿ ಕಂದಾಯ ನಿರೀಕ್ಷಕರು ಸುಮಾರು ವರ್ಷಗಳಿಂದ ಠಿಕಾಣಿ ಹೂಡಿಕೊಂಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು, ಸಚಿವರು ನಮ್ಮ ಜಿಲ್ಲೆಯವರೇ ಆಗಿರುವುದು ವಿಶೇಷ ಗಮನ ಹರಿಸಬೇಕು ಎಂದು ಕೋರಿದರು.