ನ್ಯೂಸ್

ಫಾರೆಕ್ಸ್ ಟ್ರೇಡಿಂಗ್ ವಂಚನೆ: ಮಹಿಳೆಯಿಂದ 11 ಲಕ್ಷಕ್ಕೂ ಅಧಿಕ ಹಣ ದೋಚಿದ ಸೈಬರ್​ ವಂಚಕರು!| Fraud

Fraud: ಫಾರೆಕ್ಸ್ ಟ್ರೇಡಿಂಗ್ ವಂಚನೆಯಲ್ಲಿ 33 ವರ್ಷದ ಮಹಿಳೆಯೊಬ್ಬರು 11.5 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.

ವಂಚನೆಗೊಳಗದ ಮಹಿಳೆಯನ್ನು ಅರುಣಾ ಎಂದು ಗುರುತಿಸಲಾಗಿದೆ. ಅಭಿರಾಮ್ ಎಕ್ಸ್​ಪೋಟ್ಸ್​ನ ಸಿಇಒ ಎಂದು ಆರಾಧ್ಯ ಎಂಬುವವರು ಪರಿಚಯಿಸಿಕೊಂಡಿದ್ದು, ಫಾರೆಕ್ಸ್ ಟ್ರೇಡಿಂಗ್ ಹೂಡಿಕೆ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ ಆರೋಪಿ, ಅರುಣಾಳಿಗೆ ಫಾರೆಕ್ಸ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಅಧಿಕ ಲಾಭ ಪಡೆಯುವುದಾಗಿ ಮನವೊಲಿಸಿದ್ದರು. ನಂತರ ಆರಾಧ್ಯ ಯುಪಿಐ ಐಡಿಗಳನ್ನು ಒದಗಿಸಿ, ಹಣವನ್ನು ಕಳಿಯಿಸುವಂತೆ ಹೇಳಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಆರಾಧ್ಯರವರನ್ನು ನಂಬಿದ ಅರುಣಾ, ನವೆಂಬರ್ 19 ರಿಂದ ಏಪ್ರಿಲ್​ 29, 2025 ರ ನಡುವೆ ಅನೇಕ ಕಂತುಗಳಲ್ಲಿ ಒಟ್ಟು 11,50,480 ರೂ.ಗಳನ್ನು ಆಕೆಯ ಕೌಂಟ್​ಗೆ ಜಮಾ ಮಾಡಿದ್ದಾಳೆ.

ಆದರೆ, ಆರೋಪಿಯು ಯಾವುದೇ ವ್ಯಾಪಾರ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಿಲ್ಲ. ಹಾಗೂ ಸಂತ್ರಸ್ತೆಗೆ ಹಿಂದಿರುಗಿಸದೇ ಇರುವುದರಿಂದ ಆಘಾತಗೊಂಡ ಅರುಣಾ ಕೋಟಾ ಪೊಲೀಸರಲ್ಲಿ ದೂರು ದಾಖಲಿಸಿದ್ದು, ಐಟಿ ಕಾಯ್ದೆಯ ಸೆಕ್ಸನ್​ 66(ಸಿ)(ಡಿ) ಅಡಿಯಲ್ಲಿ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

(ಏಜೆನ್ಸೀಸ್​)