ನ್ಯೂಸ್

ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತವೆಂದ ಅರಣ್ಯ ಸಚಿವ

ಬೆಂಗಳೂರು: ಸಿಎಂ ಸ್ಥಾನವನ್ನ ಶಿವಕುಮಾರ್ ಗೆ ಸಿದ್ದರಾಮಯ್ಯ ಬಿಟ್ಟು ಕೊಡಲಿ ಎಂಬ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಅದು ಅವರ ವೈಯಕ್ತಿಕ ವಿಚಾರ. ಸಿಎಂ‌ ಬದಲಾವಣೆ ಪಕ್ಷದ ಅಂತರಿಕ ವಿಚಾರ. ವರಿಷ್ಠರು, ಶಾಸಕರು ತೀರ್ಮಾನ ಮಾಡುತ್ತಾರೆ. ಹಾಗೂ ಇದು ಅಪ್ರಸ್ತುತ ವಿಚಾರ ಎಂದರು.

ಸಚಿವ ರಾಜಣ್ಣಗೆ ಮಠ ಬಿಟ್ಟು ಕೊಡುವ ಚಂದ್ರಶೇಖರನಾಥ‌ ಶ್ರೀಗಳ ಹೇಳಿಕೆ, ಅನಾವಶ್ಯಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.