ರಾಣೆಬೆನ್ನೂರ: ತಾಲೂಕಿನ ಚಳಗೇರಿ&ಕರೂರ&ಹುಣಸಿಕಟ್ಟೆ ವ್ಯಾಪ್ತಿಯ ಕೃಷ್ಣಮೃಗ ಅಭಯಾರಣ್ಯದಲ್ಲಿ ಹಲವು ತಿಂಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಅರಣ್ಯಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿಷ್ಕಾಳಜಿ ತೋರಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಕ್ರಮ ಕಲ್ಲು ಗಣಿಗಾರಿಕೆ ದಂಧೆಕೋರರು ತಿಂಗಳಾನುಟ್ಟಲೇ ಸಮಯದಲ್ಲಿ ಕಲ್ಲುಕ್ವಾರಿಗಳನ್ನು ಕೊರೆತು ಈಗಾಗಲೇ ಬೃಹತ್ ಗಾತ್ರದ ಗುಂಡಿ ತೋಡಿದ್ದಾರೆ. ಕೃಷ್ಣಮೃಗ ಸೇರಿ ಇತರ ವನ್ಯಜಿವಿಗಳು ಈ ಭಾಗದಲ್ಲಿ ಬಂದರೆ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ...
ಅಭಯಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕುರಿತು ವಿಜಯವಾಣಿ ಪತ್ರಿಕೆ ಭಾನುವಾರ "ಅಭಯಾರಣ್ಯದಲ್ಲಿ ಕಲ್ಲು ಗಣಿಗಾರಿಕೆ' ಶೀಷಿರ್ಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕುರಿತು ಕೂಡಲೇ ಪರಿಶೀಲಿಸಿ ಬಂದ್ ಮಾಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಕ್ರಮ ರಸ್ತೆ ಬಂದ್...
ಗಣಿಗಾರಿಕೆಯಿಂದ ತೆಗೆದ ಕಲ್ಲುಗಳನ್ನು ಸಾಗಿಸಲು ದಂಧೆಕೋರರು ಅಕ್ರಮವಾಗಿ ಅಭಯಾರಣ್ಯ ಪ್ರದೇಶದಲ್ಲಿ ನಿಮಿರ್ಸಿಕೊಂಡಿದ್ದ ರಸ್ತೆಗಳನ್ನು ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಟ್ರಂಚ್ ಹೊಡೆದು ಬಂದ್ ಮಾಡಿಸಿದ್ದಾರೆ. ಯಾವುದೆ ವಾಹನಗಳು ಗಣಿಗಾರಿಕೆ ಪ್ರದೇಶಕ್ಕೆ ತೆರಳದಂತೆ ಮಾಡಿದ್ದಾರೆ.
ತಪ್ಪಿತಸ್ಥರಿಗೆ ಆಗಲಿ ಶಿೆ...
ಕೃಷ್ಣಮೃಗ, ನವಿಲು ಸೇರಿ ವನ್ಯಜಿವಿಗಳು ಸ್ವಚ್ಛಂದವಾಗಿ ಓಡಾಡಿಕೊಂಡಿರಬೇಕಾದ ಅಭಯಾರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ದಂಧೆಕೋರರು ವನ್ಯಜಿವಿ ಸಂಕುಲಕ್ಕೆ ಮುಳುವಾಗಿದ್ದಾರೆ. ಇಂಥವರ ವಿರುದ್ಧ ಅರಣ್ಯಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಅಟ್ಟಬೇಕು. ಅಂದಾಗ ಮಾತ್ರ ಮತ್ತೊಬ್ಬರು ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಮಾಡಲು ಹಿಂಜರಿಯಲಿದ್ದಾರೆ ಎಂಬುದು ಸ್ಥಳಿಯ ಪರಿಸರ ಪ್ರೇಮಿಗಳ ಆಗ್ರಹವಾಗಿದೆ.